ಕರ್ನಾಟಕ

karnataka

ಖತರ್ನಾಕ್ ಪ್ರೇಮಿಗಳ ಬಂಧನ

ETV Bharat / videos

ಮೋಜು ಮಸ್ತಿ, ಮಾದಕ ಅಮಲಿಗಾಗಿ ಕಳ್ಳತನಕ್ಕಿಳಿದ ಖತರ್ನಾಕ್ ಪ್ರೇಮಿಗಳು ಅರೆಸ್ಟ್​ - ದ್ವಿಚಕ್ರ ವಾಹನ ಕಳ್ಳತನ

By

Published : Apr 26, 2023, 1:30 PM IST

ಬೆಂಗಳೂರು: ಪ್ರೀತಿಗೆ ಕಣ್ಣಿಲ್ಲ ಅಂತಾರೆ. ಆದರೆ, ಪ್ರೀತಿಯಲ್ಲಿ ಬಿದ್ದು ಮಾಡುವ ಕೆಲಸದ ಬಗ್ಗೆ ಅರಿವೂ ಇರಲ್ವಾ?. ಮೋಜು- ಮಸ್ತಿ, ಮಾದಕ ಅಮಲಿಗಾಗಿ ದ್ವಿಚಕ್ರ ವಾಹನಗಳನ್ನ ಕದಿಯುತ್ತಿದ್ದ ಖತರ್ನಾಕ್ ಪ್ರೇಮಿಗಳನ್ನ ಮಲ್ಲೇಶ್ವರಂ ಠಾಣಾ ಪೊಲೀಸರು ಬಂಧಿಸಿದ್ದಾರೆ‌. ಮುರುಗಾ ಮತ್ತು ಆತನ ಪ್ರೇಯಸಿ ಪೊಲೀಸರ ಅತಿಥಿಗಳಾದ ಲವ್ ಬರ್ಡ್ಸ್.

ದ್ವಿಚಕ್ರ ವಾಹನಗಳನ್ನ ಕದ್ದು ಅವುಗಳನ್ನು ಅಲ್ಪ ಸ್ವಲ್ಪ ಹಣಕ್ಕೆ ಮಾರಾಟ ಮಾಡುತ್ತಿದ್ದ ಆರೋಪಿಗಳು, ಬಂದ ಹಣದಲ್ಲಿ ಮಾದಕ ಪದಾರ್ಥಗಳನ್ನ ಖರೀದಿಸಿ ಮೋಜು - ಮಸ್ತಿ ಮಾಡುತ್ತಿದ್ದರು. ಶ್ರೀರಾಂಪುರ, ಮಲ್ಲೇಶ್ವರಂನ ಬೇರೆ ಬೇರೆ ಭಾಗದಲ್ಲಿ ಸುತ್ತಾಡುತ್ತಿದ್ದ ಇವರು ದ್ವಿಚಕ್ರ ವಾಹನಗಳನ್ನ ಕದ್ದು ಪರಾರಿಯಾಗುತ್ತಿದ್ದರು. ಒಮ್ಮೆ ಮುರುಗಾ ಕಳ್ಳತನ ಮಾಡಿದ್ರೆ, ಇನ್ನೊಮ್ನೆ ಆತನ ಪ್ರೇಯಸಿ ಕೈಚಳಕ ತೋರಿಸುತ್ತಿದ್ದರು.

ಇಬ್ಬರ ಕಳ್ಳತನದ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಸದ್ಯಕ್ಕೆ ಮಲ್ಲೇಶ್ವರಂ ಠಾಣಾ ಪೊಲೀಸರು ಈ ಕಳ್ಳ ಪ್ರೇಮಿಗಳನ್ನ ಬಂಧಿಸಿದ್ದು, 3 ದ್ವಿಚಕ್ರ ವಾಹನ ಹಾಗೂ ಮೊಬೈಲ್ ಫೋನ್‌ಗಳನ್ನ ವಶಕ್ಕೆ ಪಡೆದಿದ್ದಾರೆ.  

ಇದನ್ನೂ ಓದಿ :ಮುಂಬೈ ಏರ್ಪೋರ್ಟ್​ನಲ್ಲಿ 10 ಕೋಟಿ ಮೌಲ್ಯದ ಚಿನ್ನ ವಶ: ಒಬ್ಬ ಭಾರತೀಯ, 18 ಮಂದಿ ಸುಡಾನ್ ಮಹಿಳೆಯರ ಬಂಧನ

ABOUT THE AUTHOR

...view details