ಕರ್ನಾಟಕ

karnataka

ಲೋಕಸಭೆ ಚುನಾವಣೆಯಲ್ಲಿ 28ಕ್ಕೆ 28 ಸ್ಥಾನ ಗೆದ್ದೆ ಗೆಲ್ಲುತ್ತೇವೆ : ಅಶ್ವಥ್ ನಾರಾಯಣ್

ETV Bharat / videos

Lok sabha election: ಲೋಕಸಭೆ ಚುನಾವಣೆಯಲ್ಲಿ 28ಕ್ಕೆ 28 ಸ್ಥಾನ ಗೆದ್ದೇ ಗೆಲ್ಲುತ್ತೇವೆ : ಅಶ್ವತ್ಥನಾರಾಯಣ್ - ಈಟಿವಿ ಭಾರತ ಕನ್ನಡ ನ್ಯೂಸ್​​

By

Published : Jun 27, 2023, 8:48 PM IST

Updated : Jun 27, 2023, 9:52 PM IST

ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ): ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಾವು 28ಕ್ಕೆ 28 ಸ್ಥಾನಗಳನ್ನು ಗೆದ್ದೇ ಗೆಲ್ಲುತ್ತೇವೆ ಎಂದು ಮಾಜಿ ಸಚಿವ ಡಾ ಅಶ್ವತ್ಥ​ ನಾರಾಯಣ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇಲ್ಲಿನ ವಿಮಾನ ನಿಲ್ದಾಣದ ಬಳಿ ಇರುವ ನಾಡಪ್ರಭು ಕೆಂಪೇಗೌಡರ ಪ್ರಗತಿ ಪ್ರತಿಮೆಗೆ ಭೇಟಿ ನೀಡಿ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್​​ನ ಬಣ್ಣ ಬಯಲಾಗಿದೆ. ಬೆಲೆ ಏರಿಕೆ, ವಿದ್ಯುತ್ ಬಿಲ್ ಏರಿಕೆಯಿಂದ ಜನ ಕಂಗೆಟ್ಟಿದ್ದಾರೆ. ಕಾಂಗ್ರೆಸ್ ನಲ್ಲಿ ಉತ್ತಮ ವರಿಷ್ಠರಿದ್ದಾರೆ ಎಂದು ಯಾರು ವೋಟ್​​ ಹಾಕಿಲ್ಲ. ಗ್ಯಾರಂಟಿ ಮತ್ತು ಕೂಪನ್ ನೋಡಿ ಜನ ಮತ ನೀಡಿದರು. ಆದರೆ ಈಗ ಗ್ಯಾರಂಟಿಯಲ್ಲೂ ಮೋಸ, ಕೂಪನ್​​ನಲ್ಲೂ ಮೋಸ ಎಂದು ಟೀಕಿಸಿದರು.

ಅನ್ನಭಾಗ್ಯ 10 ಕೆಜಿ ಅಕ್ಕಿ ಕೊಡುತ್ತೇವೆ ಎಂದು ಹೇಳಿದ್ದರು. ಒಂದು ಕೆಜಿ ಅಕ್ಕಿಯನ್ನು ಕಾಂಗ್ರೆಸ್​ ಸರ್ಕಾರ ಕೊಟ್ಟಿಲ್ಲ. ಕೇಂದ್ರ ಸರ್ಕಾರ ನೀಡುತ್ತಿರುವ 5 ಕೆಜಿ ಅಕ್ಕಿ ಮಾತ್ರ ಜನರಿಗೆ ತಲುಪುತ್ತಿದೆ. 10 ಕೆಜಿ ಅಕ್ಕಿ ಕೊಡುತ್ತೇವೆ ಎಂದ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರನ್ನು ಮತ್ತು ಕಾಂಗ್ರೆಸ್​ನವರನ್ನು ಹುಡುಕುವಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವ್ಯಂಗ್ಯವಾಡಿದರು. ರಾಜ್ಯದಲ್ಲಿ ಶಕ್ತಿ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಆದರೆ ಹಳೆ ಬಸ್​ಗಳನ್ನು ಬಿಟ್ಟಿದ್ದಾರೆ. ಈ ಬಸ್​ಗಳು ಅಲ್ಲಲ್ಲಿ ನಿಂತು ಹೋಗಿ ಜನ ಪರದಾಡುತ್ತಿದ್ದಾರೆ. ಈ ಯೋಜನೆ ಸ್ವಲ್ಪ ಅಲ್ಲಲ್ಲಿ ಕಾಣುತ್ತಿದೆ ಎಂದು ಹೇಳಿದರು. ಇಂದು ಕೆಂಪೇಗೌಡರ ಜಯಂತಿ. ದ್ವೇಷದ ವೈಮನಸ್ಸಿನ ದಿನವಾಗಬಾರದು. ನಾನು ಡಿಕೆಶಿ ಅವರಿಗೂ ಶುಭಾಶಯ ಕೋರುತ್ತೇನೆ. ಅವರು ಕೆಂಪೇಗೌಡರಿಂದ ಪ್ರೇರಣೆ ಪಡೆದು ನಾಡಿಗೆ ಒಳ್ಳೆಯದನ್ನು ಮಾಡಲಿ ಎಂದು ಮಾಜಿ ಸಚಿವ ಅಶ್ವತ್ಥನಾರಾಯಣ್​ ಹೇಳಿದರು.

ಇದನ್ನೂ ಓದಿ :ಮಾಜಿ ಸಚಿವ ಅಶ್ವಥ್ ನಾರಾಯಣ ವಿರುದ್ಧದ ತನಿಖೆಗೆ ಹೈಕೋರ್ಟ್​ ತಡೆ

Last Updated : Jun 27, 2023, 9:52 PM IST

ABOUT THE AUTHOR

...view details