ಕರ್ನಾಟಕ

karnataka

ಸಂಸತ್​ ಕಲಾಪ ಸತತ ಮುಂದೂಡಿಕೆ

ETV Bharat / videos

ಪಟ್ಟು ಬಿಡದ ಪಕ್ಷಗಳು: 22 ದಿನಗಳಿಂದ ಸಂಸತ್​ ಕಲಾಪ ವ್ಯರ್ಥ

By

Published : Apr 3, 2023, 12:47 PM IST

ನವದೆಹಲಿ:ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಪ್ರಜಾಪ್ರಭುತ್ವದ ಲಂಡನ್​ ಹೇಳಿಕೆಗೆ ಕ್ಷಮೆ ಯಾಚಿಸಲು ಬಿಜೆಪಿ, ಅದಾನಿ ಗ್ರೂಪ್​ ಹಗರಣದ ತನಿಖೆ ಮತ್ತು ರಾಹುಲ್​ ಗಾಂಧಿ ಸಂಸದ ಸ್ಥಾನ ಅನರ್ಹತೆಯ ವಿರುದ್ಧ ಕಾಂಗ್ರೆಸ್​ ನಡೆಸುತ್ತಿರುವ ಪ್ರತಿಭಟನೆಯಿಂದಾಗಿ ಸಂಸತ್​ ಅಧಿವೇಶನ ವ್ಯರ್ಥವಾಗುತ್ತಲೇ ಸಾಗಿದೆ. ಇಂದು ಬೆಳಗ್ಗೆ ಉಭಯ ಸದನಗಳು ಸೇರಿದ ಕೆಲವೇ ನಿಮಿಷಗಳಲ್ಲಿ ಗಲಾಟೆ ಆರಂಭವಾಗಿ ಮಧ್ಯಾಹ್ನ 2 ಗಂಟೆಗೆ ಸಭಾಧ್ಯಕ್ಷರು ಸದನಗಳನ್ನು ಮೂಂದೂಡಿದರು. ಮಾರ್ಚ್​ 13 ರಿಂದ ಆರಂಭವಾಗಿರುವ 2ನೇ ಹಂತದ ಬಜೆಟ್​ ಅಧಿವೇಶನ ಸತತ 22 ನೇ ದಿನವೂ ಯಾವುದೇ ಫಲ ಕಂಡಿಲ್ಲ.

ರಾಜ್ಯಸಭೆ ಕಲಾಪ ಆರಂಭವಾದ ಕೆಲವೇ ಕ್ಷಣಗಳಲ್ಲಿ ಅದಾನಿ ಗ್ರೂಪ್ ವಿರುದ್ಧದ ಆರೋಪಗಳ ಕುರಿತು ಜಂಟಿ ಸಂಸದೀಯ ತನಿಖೆಗೆ ಒತ್ತಾಯಿಸಿ ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳ ಸಂಸದರು ಗದ್ದಲ ಎಬ್ಬಿಸಿದರು. ಕಾಂಗ್ರೆಸ್ ಸಂಸದರು ಕಪ್ಪು ಬಟ್ಟೆ ಧರಿಸಿ ಬಂದರೆ, ಟಿಎಂಸಿ ಸದಸ್ಯರು ಕಪ್ಪು ಮುಖವಾಡಗಳನ್ನು ಧರಿಸಿದ್ದರು. ಇಂದಿನ ಕಲಾಪದ ಪಟ್ಟಿಯನ್ನು ಸಭಾಪತಿ ಜಗದೀಪ್​ ಧನಕರ್​ ಅವರು ಕೈಗೆತ್ತಿಕೊಂಡ ತಕ್ಷಣವೇ ಪ್ರತಿಭಟನೆ ಆರಂಭಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿಸಿಕೊಂಡು ಮೋದಿ- ಅದಾನಿ ಭಾಯಿ ಭಾಯ್ ಎಂದು ಘೋಷಣೆ ಕೂಗಿದರು. ಗದ್ದಲ ಹೆಚ್ಚಾದ ಕಾರಣ ಸಭಾಪತಿಗಳು ಸದನವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಿದರು.

ಲೋಕಸಭೆಯಲ್ಲಿ ಸಂಸದರ ನಿಧನಕ್ಕೆ ಸಂತಾಪ:ಇತ್ತೀಚೆಗೆ ನಿಧನರಾದ ಹಾಲಿ ಸಂಸದ ಗಿರೀಶ್ ಬಾಪಟ್ ಮತ್ತು ಮಾಜಿ ಸಂಸದ ಇನ್ನೋಸೆಂಟ್ ಅವರಿಗೆ ಸಂತಾಪ ಸೂಚಿಸಿ ಲೋಕಸಭೆಯ ಕಲಾಪವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಯಿತು. ಪುಣೆಯ ಹಾಲಿ ಬಿಜೆಪಿ ಸಂಸದರಾಗಿದ್ದ ಗಿರೀಶ್​ ಬಾಪಟ್ ಅವರು ಮಾರ್ಚ್ 29 ರಂದು ನಿಧನರಾದರು. ತ್ರಿಶೂರ್‌ನ ಚಾಲಕುಡಿ ಕ್ಷೇತ್ರದ ಮಾಜಿ ಸಂಸದರಾಗಿದ್ದ ಇನ್ನೋಸೆಂಟ್ ಅವರು ಮಾರ್ಚ್ 26 ರಂದು ಇಹಲೋಕ ತ್ಯಜಿಸಿದ್ದರು. ಇಬ್ಬರು ನಾಯಕರಿಗೆ ಗೌರವ ಸೂಚಕವಾಗಿ ಲೋಕಸಭೆಯಲ್ಲಿ ನಿಮಿಷಗಳ ಕಾಲ ಮೌನಾಚರಣೆ ನಡೆಸಿ, ಕಲಾಪವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಯಿತು. ಈ ಹಿಂದೆ ನಿಧನರಾದ ಸದಸ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಬಳಿಕ ಸದನವನ್ನು ದಿನದ ಮಟ್ಟಿಗೆ ಮುಂದೂಡಲಾಗುತ್ತಿತ್ತು.

ಇದನ್ನೂ ಓದಿ:ಮಾಸ್ ಲೀಡರ್​​ಗಳ ಕೊರತೆ: ಬಿಜೆಪಿ, ಕಾಂಗ್ರೆಸ್, ಜೆಡಿಎಸ್​​ಗೆ 'ಮಾಜಿ ಸಿಎಂ'ಗಳೇ ಪಿಲ್ಲರ್!

ABOUT THE AUTHOR

...view details