ಲೋಕಸಭಾ ಟಿಕೆಟ್ ಆಕಾಂಕ್ಷಿಗಳ ಸಭೆ: ಡಿ.30ರೊಳಗೆ ಪಟ್ಟಿ ನೀಡಬೇಕು- ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ - list of Lok Sabha ticket aspirants
Published : Dec 15, 2023, 8:29 PM IST
ಧಾರವಾಡ: ಲೋಕಸಭಾ ಕ್ಷೇತ್ರದ ಆಕಾಂಕ್ಷಿಗಳ ಸಭೆ ಈಗಾಗಲೇ ಆಗಬೇಕಿತ್ತು. ಗೃಹ ಲಕ್ಷ್ಮಿ ಯೋಜನೆಯಲ್ಲಿ ಬ್ಯುಸಿಯಾಗಿದ್ದರಿಂದ ಸ್ವಲ್ಪ ವಿಳಂಬವಾಯಿತು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ಧಾರವಾಡ ಲೋಕಸಭಾ ಕ್ಷೇತ್ರದ ಚುನಾವಣೆ ಆಕಾಂಕ್ಷಿಗಳ ಸಭೆ ಹಿನ್ನೆಲೆಯಲ್ಲಿ ಶುಕ್ರವಾರ ಸಂಜೆ ಅವರು ಮಯೂರ ಹೋಟೆಲ್ಗೆ ಆಗಮಿಸಿದ್ದರು. ಸಭೆಗೂ ಮುನ್ನ ಅಲ್ಲಿ ಸೇರಿದ್ದ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ನಾನು ಉಡುಪಿ ಜಿಲ್ಲೆಯ ಉಸ್ತುವಾರಿ ಆಗಿದ್ದರೂ ಕೂಡ ಬೆಳಗಾವಿಗೆ ಹೋಗಲು ವಾರಕ್ಕೆ ಎರಡು ದಿನ ಸಿಗುತ್ತಿತ್ತು. ಧಾರವಾಡಕ್ಕೆ ಬರೋದಕ್ಕೆ ಸ್ವಲ್ಪ ತಡವಾಗಿದೆ. ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಡಿಸೆಂಬರ್ 30ರೊಳಗೆ ಆಕಾಂಕ್ಷಿಗಳ ಪಟ್ಟಿ ಕೊಡಬೇಕಿದೆ. ಈ ಸಂಬಂಧ ನನಗೆ ಪಕ್ಷದ ಅಧ್ಯಕ್ಷರು ಹಾಗೂ ಮುಖ್ಯಮಂತ್ರಿಗಳು ಸೂಚನೆ ಕೊಟ್ಟಿದ್ದಾರೆ. ಈ ಭಾಗದ ಶಾಸಕರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಮಾತನಾಡಬೇಕಿದೆ ಎಂದರು.
ರೂಪುರೇಷೆ ಮತ್ತು ಆಯ್ಕೆ ಬಗ್ಗೆ ಪ್ರತಿಕ್ರಿಯಿಸಿ, ಆಕಾಂಕ್ಷಿಗಳೆಲ್ಲ ಖುದ್ದಾಗಿ ಭೇಟಿಯಾಗಿ ಅರ್ಜಿ ಕೊಡಬೇಕು. ಅಲ್ಪಸಂಖ್ಯಾತರಿಂದ ರಾಜ್ಯದಲ್ಲಿ ಮೂರು ಕ್ಷೇತ್ರದ ಬೇಡಿಕೆ ಇದೆ. ಎಲ್ಲವನ್ನೂ ಪಕ್ಷದ ಅಧ್ಯಕ್ಷರಿಗೆ ವರದಿ ಮಾಡುತ್ತೇನೆ. ಸದ್ಯಕ್ಕೆ ಧಾರವಾಡದಿಂದ ಅಲ್ಪಸಂಖ್ಯಾತರು ಯಾರೂ ಅರ್ಜಿ ಸಲ್ಲಿಸಿಲ್ಲ. ನಾನು ಈಗ ಎಲ್ಲ ಮುಖಂಡರೊಂದಿಗೆ ಸಭೆ ಮಾಡುವೆ ಎಂದರು.
ಇದನ್ನೂ ಓದಿ:ಪಂಚರಾಜ್ಯ ಫಲಿತಾಂಶ: ಲೋಕಸಭೆ ಸಮರಕ್ಕೆ ಬಿಜೆಪಿ - ಕಾಂಗ್ರೆಸ್ ಪಕ್ಷಗಳಲ್ಲಿ ಹೆಚ್ಚಿದ ಹುಮ್ಮಸ್ಸು