ಸೊಂಟದ ಸುತ್ತ ಮದ್ಯದ ಬಾಟಲಿ! ಪೊಲೀಸರ ಕಂಡು ಚಳಿಯಲ್ಲೂ ಬೆವರಿ ಸಿಕ್ಕಿಬಿದ್ದ! - kannada top news
ಗೋಪಾಲ್ಗಂಜ್: ಉತ್ತರಪ್ರದೇಶದಲ್ಲಿ ಅಕ್ರಮ ಮದ್ಯ ಮಾರಾಟ, ಸಾಗಾಟದ ವಿರುದ್ಧ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ಇದರ ಹೊರತಾಗಿಯೂ ಮದ್ಯಪ್ರಿಯರು ಸರಕುಗಳನ್ನು ತಲುಪಿಸಲು ವಿಭಿನ್ನ ತಂತ್ರಗಳನ್ನು ಅನುಸರಿಸುತ್ತಿದ್ದಾರೆ. ಕುಚಯಕೋಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪೊಲೀಸರು ರಾತ್ರಿ ಹೊತ್ತು ವಾಹನ ತಪಾಸಣೆ ನಡೆಸುತ್ತಿದ್ದಾಗ ವಿಭಿನ್ನ ಪ್ರಕರಣವೊಂದನ್ನು ಪತ್ತೆ ಹಚ್ಚಿದರು. ಬೈಕ್ ಸವಾರನೊಬ್ಬ ಚೆಕ್ಕಿಂಗ್ ಪಾಯಿಂಟ್ ಮೂಲಕ ವೇಗವಾಗಿ ಹಾದು ಹೋಗುವ ಆತುರ ತೋರಿಸಿದ್ದಾನೆ. ವಿಪರೀತ ಚಳಿಯಲ್ಲೂ ಆತನ ಹಣೆಯಲ್ಲಿ ಬೆವರು ಸುರಿಯುತ್ತಿತ್ತು. ಇದನ್ನು ಗಮನಿಸಿದ ಪೊಲೀಸರಿಗೆ ಅನುಮಾನ ಮೂಡಿದೆ. ತಕ್ಷಣ ಆತನನ್ನು ನಿಲ್ಲಿಸಿ ತನಿಖೆ ಮಾಡಿದಾಗ ಅಚ್ಚರಿ ಕಾದಿತ್ತು. ಆತ ಧರಿಸಿಕೊಂಡಿದ್ದ ಜಾಕೆಟ್ ಮತ್ತು ಸ್ವೆಟರ್‌ನೊಳಗೆ ಸಾಕಷ್ಟು ಮದ್ಯದ ಬಾಟಲಿಗಳಿದ್ದವು. ಅದನ್ನು ಆತ ಸೊಂಟದ ಸುತ್ತ ಸೆಲ್ಲೋ ಟೇಪ್ ಮೂಲಕ ಜೋಡಿಸಿಕೊಂಡಿದ್ದ. ಅಕ್ರಮವಾಗಿ ಮದ್ಯ ಸಾಗಿಸಲು ಹೋಗಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.
Last Updated : Feb 3, 2023, 8:36 PM IST