ಚಕ್ರ ಸ್ಫೋಟಗೊಂಡು ವಾಹನ ಪಲ್ಟಿ; ಅಪಾರ ಪ್ರಮಾಣದ ಮದ್ಯ ನಷ್ಟ - kalaburagi
ಕಲಬುರಗಿ: ಮದ್ಯ ಸಾಗಿಸುತ್ತಿದ್ದ ವಾಹನದ ಚಕ್ರ ಸ್ಫೋಟಗೊಂಡು ಪಲ್ಟಿಯಾಗಿರುವ ಘಟನೆ ಜೇವರ್ಗಿ ತಾಲೂಕಿನ ಹಸನಾಪುರ ಬಳಿ ನಡೆದಿದೆ. ಲಕ್ಷಾಂತರ ರೂಪಾಯಿ ಮೌಲ್ಯದ ಮದ್ಯದ ಬಾಟಲಿಗಳು ಒಡೆದು ಹೋಗಿವೆ. ಕಲಬುರಗಿಯಿಂದ ಜೇವರ್ಗಿಯ ವೈನ್ ಶಾಪ್‌ಗಳಿಗೆ ಮದ್ಯ ಸರಬರಾಜು ಮಾಡಲಾಗುತ್ತಿತ್ತು ಎಂದು ತಿಳಿದುಬಂದಿದೆ. ಭೀಮಾ ಸೇತುವೆಯ ಹತ್ತಿರದ ಹಸನಾಪುರ ಬಳಿ ಚಕ್ರ ಸಿಡಿದು ವಾಹನ ಚಾಲಕನ ನಿಯಂತ್ರಣ ಕಳೆದುಕೊಂಡು ಉರುಳಿದೆ. ಮದ್ಯದ ಬಾಟಲಿಗಳು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಅಪಾರ ಪ್ರಮಾಣದ ಮದ್ಯ ರಸ್ತೆಯಲ್ಲಿ ಹರಿದಿದೆ. ಘಟನೆಯ ನಂತರ ರಸ್ತೆ ಸಂಪರ್ಕ ಕಡಿತಗೊಂಡು ವಾಹನ ಸವಾರರು ಪರದಾಡಿದರು. ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ಪೊಲೀಸ್ ಮೂಲಗಳಿಂದು ಮಾಹಿತಿ ದೊರೆತಿದೆ.
Last Updated : Feb 3, 2023, 8:38 PM IST