ಕರ್ನಾಟಕ

karnataka

ವಿಧಾನಸೌಧದ ಒಳಗೆ ಸಾಗಿಸುತ್ತಿದ್ದಾಗ ವ್ಯಕ್ತಿಯ ಕೈಯಿಂದ ಜಾರಿದ ಮದ್ಯದ ಬಾಟಲಿ - ವಿಡಿಯೋ

ETV Bharat / videos

ವಿಧಾನಸೌಧದ ಒಳಗೆ ಸಾಗಿಸುತ್ತಿದ್ದಾಗ ವ್ಯಕ್ತಿಯ ಕೈಯಿಂದ ಜಾರಿದ ಮದ್ಯದ ಬಾಟಲಿ - ವಿಡಿಯೋ

By

Published : Mar 7, 2023, 8:50 PM IST

ಬೆಂಗಳೂರು : ಮದ್ಯ ತೆಗೆದುಕೊಂಡು ಹೋಗುತ್ತಿದ್ದ ವ್ಯಕ್ತಿಯ ಕೈಯಿಂದ ಅಚಾನಕ್ ಆಗಿ ಮದ್ಯದ ಬಾಟಲಿ ಕೈ ಜಾರಿ ಕೆಳಗೆ ಬಿದ್ದು ಒಡೆದಿರುವ ಘಟನೆ ವಿಧಾನಸೌಧದ ಪಶ್ಚಿಮ ದ್ವಾರದ ಬಳಿ ನಡೆದಿದೆ. ಸರ್ಕಾರಿ ಕೆಲಸ ದೇವರ ಕೆಲಸ ಎಂಬ ಧ್ಯೇಯವಾಕ್ಯ ಹೊಂದಿರುವ ಶಕ್ತಿಸೌಧದಲ್ಲಿ ಮದ್ಯದ ಬಾಟಲಿ ಪತ್ತೆಯಾಗಿರುವುದೇ ಇರುಸು ಮುರುಸಿಗೆ ಕಾರಣವಾಗಿದೆ. ಕೆಲ ದಿನಗಳ ಹಿಂದೆ ವಿಧಾನಸೌಧದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಹಣ ಪತ್ತೆಯಾಗಿತ್ತು. ಈಗ ವಿಧಾನಸೌಧದ ದ್ವಾರದಲ್ಲಿ ಎಣ್ಣೆ ಬಾಟಲ್​ಗಳು ಪತ್ತೆಯಾಗಿರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ವಿಧಾನಸೌಧದ ಪಶ್ಚಿಮ ದ್ವಾರದ ಮೂಲಕ ಮದ್ಯ ತೆಗೆದುಕೊಂಡು ಹೋಗುತ್ತಿದ್ದ ವ್ಯಕ್ತಿಯ ಕೈಯಿಂದ ಮದ್ಯದ ಬಾಟಲಿ ಕೆಳಗೆ ಬಿದ್ದು ಒಡೆದು ಹೋಗಿದೆ. ಮದ್ಯದ ಬಾಟಲಿ ಕೆಳಗೆ ಬೀಳುತ್ತಿದ್ದಂತೆ ವ್ಯಕ್ತಿ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಭದ್ರತಾ ಸಿಬ್ಬಂದಿ ಇದ್ದರೂ ಮದ್ಯದ ಬಾಟಲಿ ವಿಧಾನಸೌಧದ ಒಳಗೆ ಬಂದದ್ದು ಹೇಗೆ? ಯಾರಿಗಾಗಿ ಆ ವ್ಯಕ್ತಿ ಮದ್ಯ ತರುತ್ತಿದ್ದ ಎಂಬ ಪ್ರಶ್ನೆ ಎದ್ದಿದೆ. 

ವಿಧಾನಸೌಧದಲ್ಲಿ ಮದ್ಯ ಪತ್ತೆಯಾಗಿರುವುದು ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಬಿಗಿ ಭದ್ರತೆ ಮಧ್ಯೆ ವಿಧಾನಸೌಧಕ್ಕೆ ಬರುವವರನ್ನು ಸ್ಕ್ಯಾನಿಂಗ್ ಮಾಡಲಾಗುತ್ತದೆ. ಆದರೂ ಮದ್ಯ ಶಕ್ತಿಸೌಧದ ಒಳಗೆ ಹೇಗೆ ಬಂತು ಎಂಬುದು ಎಲ್ಲರ ಪ್ರಶ್ನೆಯಾಗಿದೆ.

ಇದನ್ನೂ ಓದಿ :ವರ್ಗಾವಣೆಗೊಂಡ ಪ್ರಾಂಶುಪಾಲರೇ ಬೇಕೆಂದು ಪಟ್ಟು ಹಿಡಿದ ವಿದ್ಯಾರ್ಥಿಗಳು

ABOUT THE AUTHOR

...view details