ಹದಿನೈದು ದಿನಗಳಿಂದ ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ - ವಿಡಿಯೋ - etv bharat kannada
ದಾವಣಗೆರೆ: ಕಳೆದ ಹದಿನೈದು ದಿನಗಳಿಂದ ಚನ್ನಗಿರಿ ಭಾಗದ ಜನರ ನಿದ್ದೆಗೆಡಿಸಿದ್ದ ಚಿರತೆ ಚನ್ನಗಿರಿ ತಾಲೂಕಿನ ಗರಗ ಗ್ರಾಮದಲ್ಲಿ ಸೆರೆ ಸಿಕ್ಕಿದೆ. ಅರಣ್ಯ ಇಲಾಖೆಯಿಂದ ಗರಗರ ಗ್ರಾಮದ ನಿವಾಸಿ ಪಾಲಾಕ್ಷಪ್ಪ ಎಂಬುವರ ಮನೆಯ ಮುಂದೆ ಇಡಲಾಗಿದ್ದ ಬೋನಿನಲ್ಲಿ ಚಿರತೆ ಸೆರೆಯಾಗಿದೆ. ಕಳೆದ ಹದಿನೈದು ದಿನಗಳಿಂದ ಗ್ರಾಮದ ಜನರಲ್ಲಿ ಆತಂಕ ಮೂಡಿಸಿದ್ದ ಚಿರತೆ ಗ್ರಾಮದ ಹಲವು ಶ್ವಾನಗಳನ್ನು ಬಲಿ ಪಡೆದಿತ್ತು. ಇದರಿಂದ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದರಿಂದ ಜನರು ಒಂಟಿಯಾಗಿ ಓಡಾಡಲು ಹೆದರುವಂತಾಗಿತ್ತು.
ಹೀಗಾಗಿ ಗ್ರಾಮಸ್ಥರು ಅರಣ್ಯ ಇಲಾಖೆಗೆ ಅದಷ್ಟು ಬೇಗ ಚಿರತೆಯನ್ನು ಸೆರೆ ಹಿಡಿಯುವಂತೆ ಒತ್ತಾಯಿಸಿದ್ದರು. ಶ್ವಾನಗಳ ರುಚಿ ಕಂಡಿದ್ದ ಚಿರತೆ ರಾತ್ರಿ ವೇಳೆ ಗ್ರಾಮಕ್ಕೆ ಬರುತ್ತಿತ್ತು. ಇನ್ನು ಚಿರತೆ ಹೆಜ್ಜೆ ಗುರುತು ಪತ್ತೆ ಮಾಡಿ ಬೋನು ಇಟ್ಟಿದ್ದ ಅರಣ್ಯ ಇಲಾಖೆ ಅಧಿಕಾರಿಗಳು, ಬೋನಿನ ಒಳಗಡೆ ಶ್ವಾನ ಇರಿಸಿ ಚಿರತೆ ಸೆರೆ ಹಿಡಿಯುವಲ್ಲಿ ಕೊನೆಗೂ ಯಶಸ್ವಿಯಾಗಿದ್ದರೆ. ಚಿರತೆ ಸೆರೆ ಹಿನ್ನೆಲೆ ಗ್ರಾಮದ ಜನರು ನಿಟ್ಟುಸಿರು ಬಿಟ್ಟಿದ್ದಾರೆ. ಈ ಹಿಂದೆ ಗ್ರಾಮದಲ್ಲಿನ ಚಿರತೆಯ ಚಲನವಲನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸದ್ಯ ಚಿರತೆ ಸೆರೆ ಸಿಕ್ಕಿ ಹಿನ್ನೆಲೆ ಚಿರತೆಯನ್ನು ವೀಕ್ಷಿಸಲು ಸುತ್ತಮುತ್ತಲಿನ ಹಳ್ಳಿಯ ಜನರು ಮುಗಿಬಿದ್ದರು.
ಇದನ್ನೂ ಓದಿ:ದಾಳಿ ಮಾಡಿದ ಚಿರತೆಯನ್ನು ಕಟ್ಟಿಹಾಕಿ ಅರಣ್ಯಾಧಿಕಾರಿಗಳಿಗೆ ಒಪ್ಪಿಸಿದ ಹಾಸನದ ವ್ಯಕ್ತಿ!