ದೊಡ್ಡಬಳ್ಳಾಪುರ: ರಸ್ತೆಯಲ್ಲಿ ಚಿರತೆ ಪ್ರತ್ಯಕ್ಷ- ವಿಡಿಯೋ - ಚಿರತೆ
Published : Jan 2, 2024, 1:03 PM IST
ದೊಡ್ಡಬಳ್ಳಾಪುರ:ಕಳೆದ ಹತ್ತು ದಿನಗಳಿಂದ ದೊಡ್ಡಬಳ್ಳಾಪುರ ನಗರದ ಹೊರವಲಯದಲ್ಲಿ ಚಿರತೆ ಕಾಣಿಸಿಕೊಳ್ಳುತ್ತಿದ್ದು ಜನಾತಂಕಕ್ಕೆ ಕಾರಣವಾಗಿದೆ. ಅರಳುಮಲ್ಲಿಗೆ-ಕುಂಟನಹಳ್ಳಿ ಮಾರ್ಗಮಧ್ಯೆ ಚಿರತೆ ವಾಹನ ಸವಾರರ ಕಣ್ಣಿಗೆ ಬಿದ್ದಿದೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದವರಿಗೆ ಕಾಡುಪ್ರಾಣಿಯ ದರ್ಶನವಾಗಿದೆ. ಮೊಬೈಲ್ನಲ್ಲಿ ಓಡಾಟದ ವಿಡಿಯೋವನ್ನು ಅವರು ಸೆರೆಹಿಡಿದಿದ್ದಾರೆ.
ದೊಡ್ಡಬಳ್ಳಾಪುರದ ಅಪೆರಲ್ ಪಾರ್ಕ್, ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶ, ವೀರಾಪುರದಲ್ಲಿ ಕಾಣಿಸಿಕೊಂಡ ಚಿರತೆ ಮತ್ತು ಕುಂಟನಹಳ್ಳಿಯಲ್ಲಿ ಕಾಣಿಸಿಕೊಂಡ ಚಿರತೆ ಒಂದೇ ಎಂದು ಅರಣ್ಯಾಧಿಕಾರಿಗಳಿಂದ ತಿಳಿದು ಬಂದಿದೆ.
ಇದೇ ರೀತಿ, ಕಳೆದ ಡಿಸೆಂಬರ್ನಲ್ಲಿ ಚಾಲಕನಿಗೆ ಚಿರತೆ ಎದುರಾಗಿತ್ತು. ಆನೇಕಲ್ ತಾಲೂಕಿನ ಹುಸ್ಕೂರು ಮದ್ದೂರಮ್ಮ ದೇವಾಲಯದ ಹಿಂಬದಿ ರಸ್ತೆಯಲ್ಲಿ ನಸುಕಿನ ಜಾವ ತೆರಳುತ್ತಿದ್ದಾಗ ಗೋಚರಿಸಿತ್ತು. ಕೂಡಲೇ ಚಾಲಕ ಮೊಬೈಲ್ನಲ್ಲಿ ಚಿರತೆಯ ಫೋಟೋ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ಸಾಕಷ್ಟು ವೈರಲ್ ಆಗಿತ್ತು. ಇದಕ್ಕೂ ಮುನ್ನ, ನೆಲಮಂಗಲ ತಾಲೂಕಿನ ದಾಬಸ್ ಪೇಟೆ ಬಳಿಯ ತೋಟದ ಸಮೀಪವೂ ಚಿರತೆ ಹೊಂಚು ಹಾಕಿ ಕಾದು ಕುಳಿತು ನಾಯಿ ಮರಿಯನ್ನು ಹೊತ್ತೊಯ್ದಿತ್ತು.
ಇದನ್ನೂ ಓದಿ:ಉತ್ತರ ಕನ್ನಡ: ಸಂಚರಿಸುತ್ತಿದ್ದಾಗ ಬಸ್ನ ಚೆಸ್ಸಿ ಕಟ್, ಪ್ರಯಾಣಿಕರಿಗೆ ಗಾಯ