ಪಾಕಿಸ್ತಾನದಿಂದ ಗಡಿ ದಾಟಿ ಭಾರತದೊಳಗೆ ನುಗ್ಗಿದ ಚಿರತೆ- ವಿಡಿಯೋ
ಸಾಂಬಾ (ಜಮ್ಮು ಮತ್ತು ಕಾಶ್ಮೀರ): ಚಿರತೆಯೊಂದು ಪಾಕಿಸ್ತಾನದಿಂದ ಅಂತಾರಾಷ್ಟ್ರೀಯ ಗಡಿ ದಾಟಿ ಭಾರತದ ಭೂಭಾಗ ಪ್ರವೇಶಿಸಿರುವ ಘಟನೆ ನಡೆದಿದೆ. ಜಮ್ಮು ಕಾಶ್ಮೀರದ ಸಾಂಬಾ ಜಿಲ್ಲೆಯ ರಾಮ್ಗಢದ ಉಪವಲಯದಲ್ಲಿ ಚಿರತೆ ನುಗ್ಗಿದೆ. ಶನಿವಾರ ಸಂಜೆ ಸುಮಾರು 7 ಗಂಟೆಯ ಸುಮಾರಿಗೆ ಘಟನೆ ನಡೆದಿದೆ ಎನ್ನಲಾಗಿದ್ದು, ಚಿರತೆಯ ಚಲನವಲನಗಳ ದೃಶ್ಯ ಇಲ್ಲಿನ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಹಿನ್ನೆಲೆಯಲ್ಲಿ ಗಡಿಯಲ್ಲಿನ ಗ್ರಾಮದ ಜನರಿಗೆ ಎಚ್ಚರಿಕೆಯಿಂದ ಇರುವಂತೆ ಪೊಲೀಸರು ಸೂಚನೆ ನೀಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಚಿರತೆ ದಾಳಿ ಪ್ರಕರಣಗಳು ದೇಶದ ಅಲ್ಲಲ್ಲಿ ವರದಿಯಾಗುತ್ತಿವೆ. ಹಲವು ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ. ಇತ್ತೀಚೆಗೆ ಕರ್ನಾಟಕದ ಮೈಸೂರು ಭಾಗದಲ್ಲಿ ಚಿರತೆ ದಾಳಿ ಬಗ್ಗೆ ವರದಿಯಾಗಿತ್ತು. ಈ ಸಂಬಂಧ ಚಿರತೆ ಸೆರೆ ಕಾರ್ಯಾಚರಣೆ ನಡೆಸಲು ಅರಣ್ಯ ಇಲಾಖೆ ಕಾರ್ಯಪಡೆ ರಚಿಸಿದೆ. ರಾಜ್ಯ ಸರ್ಕಾರವೂ ವನ್ಯಜೀವಿ ದಾಳಿ ಪ್ರಕರಣಗಳ ಕಡಿವಾಣಕ್ಕೆ ಕ್ರಮ ಜರುಗಿಸುತ್ತಿದೆ.
ಇದನ್ನೂ ಓದಿ:ಅರಣ್ಯದಲ್ಲಿ ಮರ ಕಡಿದ ಆರೋಪ: ವ್ಯಕ್ತಿಗೆ ಗುಂಡಿಕ್ಕಿ ಹತ್ಯೆ ಮಾಡಿದ ಮಾವೋವಾದಿಗಳು