ಹಾಸನ ಕೈಗಾರಿಕಾ ಪ್ರದೇಶದಲ್ಲಿ ಚಿರತೆ ಪ್ರತ್ಯಕ್ಷ: ವಿಡಿಯೋ ವೈರಲ್ - ಈಟಿವಿ ಭಾರತ ಕರ್ನಾಟಕ
ಹಾಸನ: ಶನಿವಾರ ತಡರಾತ್ರಿ ಹಾಸನದ ಕೈಗಾರಿಕಾ ಪ್ರದೇಶದ ಕಾಂಪೌಂಡ್ ಮೇಲೆ ಚಿರತೆಯೊಂದು ಪ್ರತ್ಯಕ್ಷವಾಗಿದೆ. ಘರ್ಜಿಸುತ್ತ ರಾಜ ಗಾಂಭೀರ್ಯದಿಂದ ನಡೆದುಕೊಂಡು ಹೋಗುತ್ತಿರುವ ದೃಶ್ಯವನ್ನು ಕೈಗಾರಿಕಾ ಪ್ರದೇಶದಲ್ಲಿ ಕೆಲಸ ನಿರ್ವಹಿಸುವ ಸಿಬ್ಬಂದಿಯೊಬ್ಬರು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ. ಇನ್ನು ವನ್ಯಜೀವಿಗಳಿಗೆ ಕಾಡು ಪ್ರದೇಶಗಳಲ್ಲಿ ಆಹಾರದ ಕೊರತೆ ಉಂಟಾಗಿ ನಾಡಿನತ್ತ ಬರುತ್ತಿರುವುದರಿಂದ ಜನರಲ್ಲಿ ಆತಂಕ ಮನೆ ಮಾಡಿದೆ. ಚಿರತೆ ಪ್ರತ್ಯಕ್ಷವಾದ ಹಿನ್ನೆಲೆಯಲ್ಲಿ ಕೈಗಾರಿಕಾ ಪ್ರದೇಶದ ಸುತ್ತಮುತ್ತ ಅರಣ್ಯ ಇಲಾಖೆ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ. ಆತಂಕದಲ್ಲಿರುವ ಸ್ಥಳೀಯರು ಚಿರತೆಯನ್ನು ಸೆರೆ ಹಿಡಿಯುವಂತೆ ಆಗ್ರಹಿಸಿದ್ದಾರೆ.
Last Updated : Feb 3, 2023, 8:38 PM IST