ಕತ್ತಲಾಗುತ್ತಿದ್ದಂತೆ ಮನೆ ಮುಂದೆ ಸುತ್ತಾಡುತ್ತಿರುವ ಚಿರತೆ.. ಸಿಸಿಟಿವಿಯಲ್ಲಿ ಚಲನವಲನ ಸೆರೆ - ಲಿಂಗದಳ್ಳಿ ಗ್ರಾಮದಲ್ಲಿ ಚಿರತೆ ಹಾವಳಿ
ದಾವಣಗೆರೆ: ಜಿಲ್ಲೆಯ ಚನ್ನಗಿರಿ ತಾಲೂಕಿನ ಲಿಂಗದಳ್ಳಿ ಗ್ರಾಮದಲ್ಲಿ ಚಿರತೆ ಹಾವಳಿ ಹೆಚ್ಚಾಗಿದ್ದು, ಲಿಂಗದಳ್ಳಿ ಗ್ರಾಮದ ಲೋಕೇಶ್ ನಾಯ್ಕ ಅವರ ಮನೆಯ ಮುಂದೆ ಚಿರತೆಯ ಚಲನವಲನ ಕಂಡು ಬಂದಿದೆ. ಹೀಗಾಗಿ, ಮಾಲೀಕ ಲೋಕೇಶ್ ಹೌಹಾರಿದ್ದಾರೆ. ಮೊದಲಿಗೆ ಮನೆಯ ಅಂಗಳದಲ್ಲಿ ಸುತ್ತಾಡಿರುವ ಚಿರತೆ ನಂತರ ಲೋಕೇಶ್ ನಾಯ್ಕ ಅವರನ್ನು ನೋಡಿ ಪರಾರಿಯಾಗಿರುವ ಘಟನೆ ಜರುಗಿದೆ. ಇನ್ನು ಅನಾಹುತ ಆಗುವ ಮೊದಲು ಎಚ್ಚೆತ್ತುಕೊಂಡು ಚಿರತೆ ಸೆರೆ ಹಿಡಿಯುವಂತೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮನವಿ ಮಾಡಿದ್ದಾರೆ.
Last Updated : Feb 3, 2023, 8:36 PM IST