ಸ್ವಾಧೀನ ಕಳೆದುಕೊಂಡ ಚಿರತೆ.. ಬರಿಗೈಯಲ್ಲೇ ಹೊತ್ತೊಯ್ದ ಅರಣ್ಯ ಇಲಾಖೆ ಸಿಬ್ಬಂದಿ - ಕೋಲಾರದಲ್ಲಿ ಅರಣ್ಯ ಇಲಾಖೆಯಿಂದ ಚಿರತೆ ರಕ್ಷಣೆ
ಕಾಲಿನ ಸ್ವಾಧೀನ ಕಳೆದುಕೊಂಡು ಅಸ್ವಸ್ಥವಾಗಿದ್ದ ಚಿರತೆಯನ್ನ ರಕ್ಷಣೆ ಮಾಡಿದ ಘಟನೆ ಕೋಲಾರ ತಾಲೂಕಿನಲ್ಲಿ ನಡೆದಿದೆ. ಮಂಗಸಂದ್ರ ಗ್ರಾಮದ ಬಳಿ ಅಸ್ವಸ್ಥಗೊಂಡಿದ್ದ ಚಿರತೆಯನ್ನ ಬನ್ನೇರುಘಟ್ಟದಿಂದ ಬಂದಿದ್ದ ತಂಡ ರಕ್ಷಿಸಿತು. ಬನ್ನೇರುಘಟ್ಟದ ಉಮಾಶಂಕರ್ ಹಾಗೂ ಕೋಲಾರ ತಾಲ್ಲೂಕು ಆರ್.ಎಫ್.ಓ ವಾಸದೇವಮೂರ್ತಿ ಅವರ ತಂಡ, ಮಂಗಸಂದ್ರ ಗ್ರಾಮದ ಬಳಿ ಹುಲ್ಲಿನ ಮೆದೆಯಡಿ ಸಿಲುಕಿಕೊಂಡಿದ್ದ ಒಂದು ವರ್ಷದ ಗಂಡು ಚಿರತೆಗೆ ಅರವಳಿಕೆ ನೀಡಿ ರಕ್ಷಣೆ ಮಾಡಿದರು. ಬಳಿಕ ಆ ಚಿರತೆಯನ್ನು ಅರಣ್ಯ ಸಿಬ್ಬಂದಿ ಬರಿಗೈಯಲ್ಲೇ ಹಿಡಿದು ವಾಹನದ ಬಳಿ ತಂದರು. ಚಿರತೆ ಹಾವಳಿಯಿಂದ ಬೇಸತ್ತಿದ್ದ ಗ್ರಾಮಸ್ಥರು ಹಲವಾರು ಬಾರಿ ಅರಣ್ಯ ಇಲಾಖೆಯವರಿಗೆ ಮನವಿ ಮಾಡಿದ್ರು. ಈ ಹಿನ್ನೆಲೆ ಅರಣ್ಯ ಇಲಾಖೆಯವರು ಸಹ ಬೆಟ್ಟದ ತಪ್ಪಲಿನಲ್ಲಿ ಬೋನ್ ಇಟ್ಟಿದ್ದರು.
Last Updated : Feb 3, 2023, 8:25 PM IST