ಬಾಗೇಶ್ವರದಲ್ಲಿ ಲಾರಿಯ ಹಾರ್ನ್ ಮತ್ತು ಲೈಟ್‌ಗೆ ಬೆದರದ ಚಿರತೆ: ರಾಜಾರೋಷವಾಗಿ ಜಾನುವಾರು ಬೇಟೆ! - ಬಾಗೇಶ್ವರದಲ್ಲಿ ಚಿರತೆ ದಾಳಿ
ಬಾಗೇಶ್ವರ( ಉತ್ತರಾಖಂಡ್): ಇತ್ತೀಚಿನ ದಿನಗಳಲ್ಲಿ ಚಿರತೆಯ ಹಾವಳಿ ಮುಂದುವರೆದಿದ್ದು ಇಲ್ಲಿನ ಜನರು ಆತಂಕದಲ್ಲಿ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿಂದೆ ಕಾಫಲೀಗೈರ್ ತಹಸಿಲ್‌ನಲ್ಲಿ ಚಿರತೆಯೊಂದು ಮಹಿಳೆಯ ಮೇಲೆ ದಾಳಿ ನಡೆಸಿ ಕೊಂದು ಹಾಕಿತ್ತು. ಇದೀಗ ಚಿರತೆಯೊಂದು ಜಾನುವಾರು ಮೇಲೆ ದಾಳಿ ನಡೆಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಳೆದ ರಾತ್ರಿ ಟ್ರಕ್ ಚಾಲಕನೊಬ್ಬ ಬಾಗೇಶ್ವರದಿಂದ ಹಲ್ದ್ವಾನಿ ಕಡೆಗೆ ಹೋಗುತ್ತಿದ್ದ. ಇದೇ ವೇಳೆ ಬಾಗೇಶ್ವರ ಪೌರಿ ಧಾರ್ ಬಳಿ ಹಸುವಿನ ಮೇಲೆ ಚಿರತೆ ದಾಳಿ ನಡೆಸುತ್ತಿರುವುದನ್ನು ಟ್ರಕ್ ಚಾಲಕ ಕಂಡಿದ್ದಾನೆ. ಈ ಸಂದರ್ಭ ಲಾರಿ ಚಾಲಕ ಹಾರ್ನ್ ಹೊಡೆದು ಚಿರತೆಯನ್ನು ಬೆದರಿಸಲು ಯತ್ನಿಸಿದ್ದಾನೆ. ಲಾರಿಯ ಬೆಳಕು ಕಂಡರೂ ಚಿರತೆ ಮಾತ್ರ ತನ್ನ ಬೇಟೆ ಬಿಟ್ಟು ಕದಲಿರಲಿಲ್ಲ. ಚಿರತೆ ದಾಳಿ ಬಗ್ಗೆ ಗ್ರಾಮಸ್ಥರು ಭಯಭೀತಗೊಂಡಿದ್ದು, ಕೂಡಲೇ ಚಿರತೆಯನ್ನು ಹಿಡಿಯುವಂತೆ ಒತ್ತಾಯಿಸಿದ್ದಾರೆ.
Last Updated : Feb 3, 2023, 8:25 PM IST