ಮೈಸೂರು: ಯುವಕನ ಬಲಿ ಪಡೆದ ಚಿರತೆ ಮಠದ ಬಳಿ ಪತ್ತೆ! - ಯುವಕನನ್ನ ಬಲಿ ಪಡೆದ ಚಿರತೆ
ಮೈಸೂರು: ತಿ.ನರಸೀಪುರ ತಾಲೂಕಿನ ಮದ್ಗಾರ್ ಲಿಂಗಯ್ಯನಹುಂಡಿಯ ಮಲ್ಲಿಕಾರ್ಜುನ ದೇವಸ್ಥಾನದ ಬಳಿ ಯುವಕನನ್ನ ಬಲಿ ಪಡೆದ ಚಿರತೆ, ಬೆಟ್ಟದ ತಪ್ಪಲಿನಲ್ಲಿರುವ ಮಠದ ಬಳಿ ಪತ್ತೆಯಾಗಿದೆ. ಮಠದ ಗೇಟ್ ಬಳಿ ನಡೆದುಕೊಂಡು ಹೋಗುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಚಿರತೆ ಸೆರೆಗೆ ಅರಣ್ಯ ಇಲಾಖೆ ಸಿಬ್ಬಂದಿ ಬೋನ್ ಇರಿಸಿದ್ದಾರೆ. ಆದರೆ ಈವರೆಗೆ ಚಿರತೆ ಬೋನಿಗೆ ಬೀಳದಿರುವುದು ಅರಣ್ಯ ಇಲಾಖೆ ಸಿಬ್ಬಂದಿಗೆ ತಲೆ ನೋವಾಗಿ ಪರಿಣಮಿಸಿದೆ. ಚಿರತೆ ಸೆರೆ ಹಿಡಿಯುವಂತೆ ಗ್ರಾಮಸ್ಥರು ಹಾಗೂ ಮೇಲಾಧಿಕಾರಿಗಳ ಒತ್ತಡ ಹೆಚ್ಚಾಗಿದೆ.
Last Updated : Feb 3, 2023, 8:31 PM IST