ಕರ್ನಾಟಕ

karnataka

ದೊಡ್ಡಬಳ್ಳಾಪುರದಲ್ಲಿ ಚಿರತೆ ಪತ್ತೆ

ETV Bharat / videos

ಹಗಲಲ್ಲಿ ಕಾಣಿಸಿಕೊಳ್ಳುತ್ತಿದ್ದ ಚಿರತೆ ರಾತ್ರಿ ವೇಳೆ ಪ್ರತ್ಯಕ್ಷ: ಆತಂಕದಲ್ಲಿ ಗ್ರಾಮಸ್ಧರು

By

Published : Feb 11, 2023, 8:29 AM IST

Updated : Feb 14, 2023, 11:34 AM IST

ದೊಡ್ಡಬಳ್ಳಾಪುರ:ತಾಲೂಕಿನ ಬಚ್ಚಹಳ್ಳಿ, ಅಂತರಹಳ್ಳಿ ಗ್ರಾಮದಲ್ಲಿ ಕಳೆದ ಕೆಲ‌ ದಿನಗಳಿಂದ ಹಗಲಲ್ಲಿ ಕಾಣಿಸಿಕೊಳ್ಳುತ್ತಿದ್ದ ಚಿರತೆ ಈಗ ರಾತ್ರಿ ವೇಳೆ ಪ್ರತ್ಯಕ್ಷವಾಗಿದೆ. ತಾಲೂಕಿನ ಅಂತರಹಳ್ಳಿ, ಬಚ್ಚಹಳ್ಳಿ, ಕೋಳೂರು ಹಾಗೂ ಶಿರವಾರ ಗ್ರಾಮದಲ್ಲಿ ಪದೇ ಪದೇ ಒಂಟಿ ಚಿರತೆ ಕಾಣಿಸಿಕೊಳ್ಳುತ್ತಿದೆ. ತಡರಾತ್ರಿ 11 ಗಂಟೆ ಸಮಯದಲ್ಲಿ ಅಂತರಹಳ್ಳಿ ಗ್ರಾಮದ ಹೊರವಲಯದಲ್ಲಿ ಪತ್ತೆಯಾದ ಚಿರತೆ ವಾಹನ ಶಬ್ಧ ಹಾಗೂ ಬೆಳಕು ಕಾಣಿಸಿಕೊಳ್ಳುತ್ತಿದ್ದಂತೆ ನೀಲಗಿರಿ ತೋಪಿನತ್ತ ಪರಾರಿಯಾಗಿದೆ. ಅಂತರಹಳ್ಳಿ ಗ್ರಾಮದಲ್ಲಿ ಕೆಲ ದಿನಗಳಿಂದ ಕಾಣಿಸಿಕೊಳ್ಳುತ್ತಿರುವ ಚಿರತೆಯಿಂದ ಜನರು ಜೀವ ಭಯದಲ್ಲಿ ಮನೆಗಳಿಂದ ಹೊರಬರುತ್ತಿಲ್ಲ. ಒಬ್ಬೊಬ್ಬರೇ ಹೊಲ ಹಾಗೂ ತೋಟದತ್ತ ತೆರಳಲು ಭಯಪಡುತ್ತಿದ್ದಾರೆ. 

ಚಿರತೆಯಿಂದ ಅದೃಷ್ಟವಶಾತ್ ಇದುವರೆಗೂ ಯಾವುದೇ ಅಪಾಯವಾಗಿಲ್ಲ. ಅಪಾಯಕ್ಕೂ ಮುನ್ನ ಚಿರತೆ ಸೆರೆ ಹಿಡಿಯುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಗ್ರಾಮದ ಸುತ್ತಮುತ್ತ ನೀಲಿಗಿರಿ ತೋಪುಗಳಿದ್ದು, ಚಿರತೆಯ ಆವಾಸಸ್ಥಾನವಾಗಿ ಮಾರ್ಪಟ್ಟಿದೆ. ಈ ಕುರಿತು ಅರಣ್ಯ ಇಲಾಖೆ ಗಮನಕ್ಕೆ ತರಲಾಗಿದೆ. ಬಚ್ಚಹಳ್ಳಿಯ ಹಳ್ಳದ ಬಳಿ ಜನವರಿ 26 ರಂದೇ ಅರಣ್ಯ ಇಲಾಖೆ ಸಿಬ್ಬಂದಿ ಬೋನು ಇರಿಸಿದ್ದಾರೆ. ಆದರೆೆ ಈವರೆಗೆ ಬೋನಿಗೆ ಬಿದ್ದಿಲ್ಲ.

ಇದನ್ನೂ ಓದಿ:ಮೈಸೂರು: ಆರ್​ಬಿಐ ಸಮೀಪ ಬೋನಿಗೆ ಬಿದ್ದ ಚಿರತೆ

Last Updated : Feb 14, 2023, 11:34 AM IST

ABOUT THE AUTHOR

...view details