ಕರ್ನಾಟಕ

karnataka

ಸತ್ತ ಜಿಂಕೆಯನ್ನು ತಿನ್ನಲು ಎಳೆದೊಯ್ಯುತ್ತಿರುವ ಚಿರತೆ

ETV Bharat / videos

Leopard carrying a dead deer: ಜಿಂಕೆಯನ್ನು ತಿನ್ನಲು ಎಳೆದೊಯ್ದ ಚಿರತೆ - ವಿಡಿಯೋ - HD Kote Nagarhole Tiger Sanctuary

By

Published : Jun 9, 2023, 1:54 PM IST

ಮೈಸೂರು: ನಾಗರಹೊಳೆ ಅಭಯಾರಣ್ಯ ವ್ಯಾಪ್ತಿಯಲ್ಲಿ ಚಿರತೆಯೊಂದು ಮೊದಲೇ ಸತ್ತಿರುವ ಬೃಹತ್​ ಜಿಂಕೆಯನ್ನು ತಿನ್ನಲು ಎಳೆದೊಯ್ಯುತ್ತಿರುವ   ದೃಶ್ಯ ಸೆರೆಯಾಗಿದೆ. ಇಂದು ಬೆಳಗ್ಗೆ ಎಚ್ ಡಿ.ಕೋಟೆ ಬಳಿ ಇರುವ ನಾಗರಹೊಳೆ ಹುಲಿ ಅಭಯಾರಣ್ಯ ವ್ಯಾಪ್ತಿಯ ಕುಟ್ಟ ಎಂಬಲ್ಲಿ ಸಫಾರಿಗೆ ತೆರಳಿದ್ದ ಪ್ರವಾಸಿಗರಿಗೆ ಅದಾಗಲೇ ಸತ್ತು ಅರ್ಧ ದೇಹ ಕೊಳೆತಿರುವ, ತನ್ನಷ್ಟೆ ದೊಡ್ಡದಾಗಿರುವ ಜಿಂಕೆಯನ್ನು ಚಿರತೆ ತಿನ್ನಲು ಎಳೆದುಕೊಂಡು ಹೋಗಿರುವ ದೃಶ್ಯ ಕಂಡಿದ್ದು ತಮ್ಮ ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದಾರೆ.​

ಸಫಾರಿಯಲ್ಲಿ ಹುಲಿ, ಚಿರತೆಗಳ ದರ್ಶನ, ಪ್ರವಾಸಿಗರಿಗೆ ರಸದೌತಣ:ಕಳೆದ ಎರಡು ದಿನಗಳ ಹಿಂದೆ ನಾಗರಹೊಳೆ ಅಭಯಾರಣ್ಯದ ವ್ಯಾಪ್ತಿಯಲ್ಲಿ ಕಪ್ಪು ಚಿರತೆಯೊಂದು ಸಫಾರಿಗೆ ಹೋದ ಪ್ರವಾಸಿಗರಿಗೆ ಕಾಣಿಸಿಕೊಂಡಿತ್ತು. ನಿನ್ನೆ ಹುಲಿ ಮತ್ತು ಹುಲಿ ಮರಿಗಳು ಪ್ರವಾಸಿಗರಿಗೆ ಕಾಣಿಸಿಕೊಂಡಿದ್ದು, ಇಂದು ಬೆಳಗ್ಗೆ ಸಹ ಪ್ರವಾಸಿಗರಿಗೆ ಚಿರತೆ ಜಿಂಕೆಯನ್ನು ಹೊತ್ತೊಯ್ದ ದೃಶ್ಯ ಕಂಡಿದ್ದು, ಇದರಿಂದ ಪ್ರವಾಸಿಗರು ಫುಲ್ ಖುಷ್ ಆಗಿದ್ದಾರೆ. ಇತ್ತೀಚೆಗೆ ಸಫಾರಿಯಲ್ಲಿ ಹೆಚ್ಚು ಪ್ರಾಣಿಗಳು ಕಾಣಿಸಿಕೊಳ್ಳುತ್ತಿರುವುದರಿಂದ ಅಭಯಾರಣ್ಯದತ್ತ ಪ್ರವಾಸಿಗರು ಆಕರ್ಷಿತರಾಗುತ್ತಿದ್ದಾರೆ.

ಇದನ್ನೂ ಓದಿ:Elephant tusk cut: ಕಾಡಾನೆ ಕಾರ್ಯಾಚರಣೆ.. ಕೋಪದಿಂದ ಕ್ರೇನ್​ಗೆ ತಿವಿದ ಗಜರಾಜನ ದಂತ ಕಟ್​

ABOUT THE AUTHOR

...view details