ಶಿವಮೊಗ್ಗದಲ್ಲಿ ಬೋನಿಗೆ ಬಿದ್ದ ಚಿರತೆ.. ನಿಟ್ಟುಸಿರು ಬಿಟ್ಟ ಜನತೆ - ಸೋಮಿನಕೊಪ್ಪ ಗ್ರಾಮ
ಶಿವಮೊಗ್ಗ ತಾಲೂಕಿನ ಆಲದಹಳ್ಳಿ ಸೋಮಿನಕೊಪ್ಪ ಗ್ರಾಮದ ಭಾಗದಲ್ಲಿ ಇತ್ತೀಚೆಗೆ ಕಾಣಿಸಿಕೊಂಡಿದ್ದ ಚಿರತೆ ಅರಣ್ಯ ಇಲಾಖೆಯಿಟ್ಟಿದ್ದ ಬೋನಿಗೆ ಬಿದ್ದಿದೆ. ಕಳೆದ ಹಲವು ದಿನಗಳಿಂದ ಆಲದಹಳ್ಳಿ ಸೋಮಿನಕೊಪ್ಪ ಸುತ್ತಮುತ್ತಲಿನ ಗ್ರಾಮಗಳಲ್ಲಿ ಚಿರತೆ ಓಡಾಡುತ್ತಿತ್ತು. ಇದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿತ್ತು. ಚಿರತೆ ಸೆರೆಹಿಡಿಯಲು ಗ್ರಾಮಸ್ಥರಿಂದ ಒತ್ತಾಯ ಹೆಚ್ಚಾಗಿತ್ತು. ಈ ಹಿನ್ನೆಲೆ ಅರಣ್ಯ ಇಲಾಖೆಯು ಚಿರತೆ ಸೆರೆ ಹಿಡಿಯುವ ಕಾರ್ಯಾಚರಣೆ ಆರಂಭಿಸಿತ್ತು. ಅದು ಸಂಚರಿಸುವ ಸ್ಥಳದಲ್ಲಿ ಬೋನು ಕೂಡ ಇಟ್ಟಿತ್ತು. ಬೋನಿಗೆ ಸೋಮವಾರ ರಾತ್ರಿ ಚಿರತೆ ಬಿದ್ದಿದೆ. ಚಿರತೆ ಸೆರೆ ಸಿಕ್ಕಿರುವುದು ಗ್ರಾಮಸ್ಥರಲ್ಲಿ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ.
Last Updated : Feb 3, 2023, 8:27 PM IST