ಸಿದ್ದರಾಮಯ್ಯ ಪ್ರಧಾನಿ ಆಗ್ಬೇಕು ಅಂತಾ ಹಣೆಯಲ್ಲಿ ಬರೆದಿದ್ರೆ ತಪ್ಪಿಸೋದಕ್ಕೆ ಆಗುತ್ತಾ?: ಪರಿಷತ್ ಸದಸ್ಯ ಎಚ್ ವಿಶ್ವನಾಥ್
Published : Sep 4, 2023, 10:30 PM IST
ಗದಗ: ಸಿದ್ದರಾಮಯ್ಯ ಪ್ರಧಾನಮಂತ್ರಿ ಆಗ್ಬೇಕು ಅಂತಾ ಅವರ ಹಣೆಯಲ್ಲಿ ಬರೆದಿದ್ರೆ, ಅವಕಾಶ ಇದ್ದರೆ ಯಾರು ತಪ್ಪಿಸೋದಕ್ಕೆ ಆಗುತ್ತೆ?.. ಎಂದು ಪರಿಷತ್ ಸದಸ್ಯ ಎಚ್ ವಿಶ್ವನಾಥ್ ಹೇಳಿದರು. ಶೆಫರ್ಡ್ ಇಂಟರ್ನ್ಯಾಷನಲ್ ಸಂಘಟನೆ ವಾರ್ಷಿಕೋತ್ಸವ ಪೂರ್ವಭಾವಿ ಸಭೆ ನಂತರ ಗದಗನಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ದೇವೇಗೌಡರು ಪ್ರಧಾನಿಮಂತ್ರಿ ಆಗ್ತೇನೆ ಅಂತಾ ಕನಸು ಕಂಡಿದ್ರಾ? ಹರದನಹಳ್ಳಿಯಲ್ಲಿ ಹುಟ್ಟಿ ಅಲ್ಲಿಂದ ಗಣತಂತ್ರ ವ್ಯವಸ್ಥೆಯಲ್ಲಿ ಎತ್ತರದ ಸ್ಥಾನಕ್ಕೆ ಏರಿದ್ರು. ಪೊಲಿಟಿಕ್ಸ್ ಅನ್ನೋದು ಅವಕಾಶ. ಡೆಮಾಕ್ರಟಿಕ್ ಐಡಿಯಾಲಜಿನಲ್ಲಿ ಪೊಲಿಟಿಕ್ಸ್ ಸೇರಿಕೊಂಡಿದೆ. ಯಾವುದನ್ನೂ ತಳ್ಳಿಹಾಕೋದಕ್ಕೆ ಸಾಧ್ಯವಿಲ್ಲ. ಏನ್ ಬೇಕಾದ್ರೂ ಆಗ್ಬಹುದು ಎಂದು ಹೇಳಿದರು.
ಹಿಂದೆಯೂ ಪಾರ್ಲಿಮೆಂಟ್ ಮೆಂಬರ್ ಆಗಿದ್ದೆ. ಮತ್ತೊಮ್ಮೆ ಆಗಬೇಕು ಎಂಬ ಬಯಕೆ ಇದೆ. ಅವಕಾಶ ಇರಬೇಕು. ಮೊದಲೇ ಹೇಳಿದಂತೆ ಪಾಲಿಟಿಕ್ಸ್ ಅನ್ನೋದು ಅವಕಾಶ ಎಂದು ಮೈಸೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಆಸೆ ವ್ಯಕ್ತಪಡಿಸಿದರು. ಚುನಾವಣೆ ಘೋಷಣೆಗೂ ಮುಂಚೆ ಹಲವರ ಹೆಸರು ಓಡಾಡುತ್ತಿರುತ್ತವೆ. ಆದರೆ, ಟಿಕೆಟ್ ಕೊಡೋದು ಒಬ್ಬರಿಗೆ ಮಾತ್ರ. ಯತೀಂದ್ರ ಆದ್ರೂ ಪರವಾಗಿಲ್ಲ. ಯತೀಂದ್ರ ಅವರಿಗೆ ಟಿಕೆಟ್ ಕೊಟ್ಟರೆ ಒಳ್ಳೆಯದು. ಯಂಗ್ ಸ್ಟಾರ್ ಇದ್ದಾರೆ. ಕ್ಷೇತ್ರ ಮತ್ತಷ್ಟು ಅಭಿವೃದ್ಧಿ ಕಾಣಬಹುದು ಎಂದು ತಮ್ಮ ಅಭಿಪ್ರಾಯ ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮುಂದೆ ಪ್ರಧಾನಮಂತ್ರಿಯನ್ನಾಗಿ ಮಾಡುವ ಉದ್ದೇಶದಿಂದ ಶೆಫರ್ಡ್ ಇಂಟರ್ನ್ಯಾಷನಲ್ ಸಮಾಜದ ಸಂಘಟನೆ ಮಾಡಲಾಗುತ್ತಿದೆಯೇ ಎಂದು ಪತ್ರಕರ್ತರು ಎಚ್ ಎಂ ರೇವಣ್ಣ ಅವರನ್ನು ಕೇಳಿದರು. ಈ ವೇಳೆ ಮಧ್ಯ ಪ್ರವೇಶ ಮಾಡಿದ ಮಾಜಿ ಸಚಿವ ಎಚ್ ವಿಶ್ವನಾಥ್, ಹೀಗೆ ಉತ್ತರಿಸಿ ಅಚ್ಚರಿ ಮೂಡಿಸಿದರು.
ಇದನ್ನೂ ಓದಿ:ಮನುಷ್ಯರಂತೆ ನಡೆಸಿಕೊಳ್ಳದ ಧರ್ಮವು ಕಾಯಿಲೆಯಷ್ಟೇ ಮಾರಕ- ಖರ್ಗೆ: ಪ್ರತಿ ಧರ್ಮಕ್ಕೂ ಪ್ರತ್ಯೇಕ ಭಾವನೆಗಳಿವೆ ಎಂದ ಮಮತಾ