ಸಿಎನ್ಜಿ ಗ್ಯಾಸ್ ಪೈಪ್‌ಲೈನ್‌ನಲ್ಲಿ ಸೋರಿಕೆ: ತಪ್ಪಿದ ಭಾರಿ ಅನಾಹುತ - Gas pipeline
ಹುಬ್ಬಳ್ಳಿ: ಕುಸುಗಲ್ ರಸ್ತೆ ಮಧುರಾ ಕಾಲೋನಿ ಹಿಂಬದಿಯಲ್ಲಿ ಇಂದು ಮಧ್ಯಾಹ್ನ ಸಿಎನ್ಜಿ ಗ್ಯಾಸ್ ಪೈಪ್ ಲೈನ್ನಲ್ಲಿ ಸೋರಿಕೆ ಉಂಟಾಗಿ ಬೆಂಕಿ ಹೊತ್ತಿಕೊಂಡ ಘಟನೆ ನಡೆದಿದೆ. ವಿಟ್ಟು ಬಾಯಿ ಕಲ್ಯಾಣ ಮಂಟಪ ಪಕ್ಕದ ಫುಟ್ ಪಾತ್ ಹತ್ತಿರ ನೆಲದಡಿ ಇರುವ ಗ್ಯಾಸ್ ಪೈಪ್ ಲೈನ್ನಲ್ಲಿ ಮಧ್ಯಾಹ್ನ ಸೋರಿಕೆ ಉಂಟಾಗಿದೆ. ಸೋರುತ್ತಿದ್ದ ಗ್ಯಾಸ್‌ಗೆ ಅಚಾನಕ್ ಆಗಿ ಬೆಂಕಿ ಹೊತ್ತಿಕೊಂಡಿದೆ. ಇದನ್ನು ಗಮನಿಸಿದ ಅಕ್ಕಪಕ್ಕದವರು ಪೊಲೀಸ್ ಮತ್ತು ಅಗ್ನಿಶಾಮಕ ದಳದವರಿಗೆ ಮಾಹಿತಿ ನೀಡಿದ್ದರಿಂದ ದೊಡ್ಡ ಅನಾಹುತ ತಪ್ಪಿದಂತಾಗಿದೆ. ಪಕ್ಕದಲ್ಲಿಯೇ ಕಲ್ಯಾಣ ಮಂಟಪ ಮತ್ತೊಂದು ಪಕ್ಕದಲ್ಲಿ ಅಪಾರ್ಟ್ ಮೆಂಟ್ ಇದ್ದು ಅಗ್ನಶಾಮಕದಳದವರು ಸಕಾಲಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ.
Last Updated : Feb 3, 2023, 8:37 PM IST