ಬಹುಕೋಟಿ ವಂಚಕ ಸುಕೇಶ್ ಜೈಲಿನ ಕೊಠಡಿಯಲ್ಲಿ ಐಷಾರಾಮಿ ವಸ್ತುಗಳು ಪತ್ತೆ
ನವದೆಹಲಿ: ಬಹುಕೋಟಿ ವಂಚಕ ಸುಕೇಶ್ ಚಂದ್ರಶೇಖರ್ ಜೈಲಿನ ಕೊಠಡಿಯಲ್ಲಿ ಐಷಾರಾಮಿ ವಸ್ತುಗಳು ಪತ್ತೆಯಾಗಿವೆ. ದೆಹಲಿ ಕಾರಾಗೃಹ ಇಲಾಖೆಯು ಆರೋಪಿ ಸುಕೇಶ್ ಚಂದ್ರಶೇಖರ್ ಅವರ ಸೆಲ್ ಮೇಲೆ ದಾಳಿ ನಡೆಸಿದಾಗ, 1 ಲಕ್ಷಕ್ಕೂ ಹೆಚ್ಚು ಮೌಲ್ಯದ ಚಪ್ಪಲಿಗಳು ಮತ್ತು ಎರಡು ದುಬಾರಿ ಜೀನ್ಸ್ ವಶಪಡಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಪಿಎಂಎಲ್‌ಎ ಸೆಕ್ಷನ್‌ಗಳ ಅಡಿ ದೆಹಲಿಯ ಮಂಡೋಲಿ ಜೈಲಿನಲ್ಲಿ ಇರಿಸಲಾಗಿದೆ.
ದಾಳಿಯ ಸಿಸಿಟಿವಿ ವಿಡಿಯೋ ಒಂದರಲ್ಲಿ ಆರೋಪಿ ಜೈಲರ್‌ಗಳಾದ ದೀಪಕ್ ಶರ್ಮಾ ಮತ್ತು ಜೈಸಿಂಗ್ ಅವರ ಮುಂದೆ ಅಳುತ್ತಿರುವುದನ್ನು ತೋರಿಸುತ್ತದೆ. ಈ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಸಿಆರ್‌ಪಿಎಫ್, ಶರ್ಮಾ ಮತ್ತು ಜೈಸಿಂಗ್ ಅವರು ಸುಕೇಶ್ ಅವರ ಸೆಲ್‌ನಲ್ಲಿ ದಾಳಿ ನಡೆಸಿದ್ದು, ಅಲ್ಲಿ 1.5 ಲಕ್ಷ ರೂಪಾಯಿ ಮೌಲ್ಯದ ಗುಸ್ಸಿ ಚಪ್ಪಲಿಗಳು ಮತ್ತು 80,000 ರೂಪಾಯಿ ಮೌಲ್ಯದ ಎರಡು ಜೀನ್ಸ್ ವಶಪಡಿಸಿಕೊಳ್ಳಲಾಗಿದೆ.
ಮಾಜಿ ರೆಲಿಗೇರ್ ಪ್ರವರ್ತಕ ಮಲ್ವಿಂದರ್ ಸಿಂಗ್ ಅವರ ಪತ್ನಿ ಜಪ್ನಾ ಅವರಿಗೆ ವಂಚನೆಗೆ ಸಂಬಂಧಿಸಿದ ಪಿಎಂಎಲ್‌ಎ ಅಡಿ ಹೊಸ ಪ್ರಕರಣದಲ್ಲಿ ಏಜೆನ್ಸಿ ಅವರನ್ನು ಬಂಧಿಸಿದ ನಂತರ ದೆಹಲಿ ನ್ಯಾಯಾಲಯವು ಇತ್ತೀಚೆಗೆ ಚಂದ್ರಶೇಖರ್ ಅವರನ್ನು ಜಾರಿ ನಿರ್ದೇಶನಾಲಯದ ಕಸ್ಟಡಿಗೆ ನೀಡಿತ್ತು. ರಿಲಿಗೇರ್ ಫಿನ್‌ವೆಸ್ಟ್ ಲಿಮಿಟೆಡ್ ಪ್ರಕರಣದಲ್ಲಿ ಹಣ ದುರುಪಯೋಗಪಡಿಸಿಕೊಂಡ ಆರೋಪದಲ್ಲಿ ಜೈಲಿನಲ್ಲಿರುವ ತನ್ನ ಪತಿಗೆ ಜಾಮೀನು ನೀಡಲು ಆ ಹಣವನ್ನು ಬಳಸುವುದಾಗಿ ಭರವಸೆ ನೀಡಿ ಜಪ್ನಾಗೆ 3.5 ಕೋಟಿ ರೂ.ಗಳನ್ನು ವಂಚಿಸಿದ್ದ ಆರೋಪ ಚಂದ್ರಶೇಖರ್ ಮೇಲಿದೆ.
ಇದನ್ನು ಓದಿ:Watch... ಬೈಸಿಕಲ್ ಮೂಲಕ ಕಚೇರಿ ತಲುಪಿದ ಸಚಿವ ತೇಜ್ ಪ್ರತಾಪ್ ಯಾದವ್..