ನೀರಿನೊಳಗೆ 'ಕಾರ್ಗಿಲ್ ವೀರ' ವಿಕ್ರಮ್ ಬಾತ್ರಾ ಚಿತ್ರ ಬಿಡಿಸಿದ ಕಲಾವಿದ: ಯುಆರ್‌ಎಫ್ ವಿಶ್ವ ದಾಖಲೆ - ನೀರಿನೊಳಗೆ ವಿಕ್ರಮ್ ಬಾತ್ರಾ ಚಿತ್ರ ಬಿಡಿಸಿದ ಕಲಾವಿದ
ತಿರುವನಂತಪುರಂ (ಕೇರಳ): ಕಾರ್ಗಿಲ್ ವಿಜಯ್ ದಿವಸ್ ಆಚರಣೆಯ ನಿಮಿತ್ತ ಕೇರಳದ ತಿರುವನಂತಪುರಂನ ಪಂಗೋಡ್ ಮಿಲಿಟರಿ ಸ್ಟೇಷನ್ನಲ್ಲಿ ಕಲಾವಿದ 'ದಾ ವಿನ್ಸಿ' ಸುರೇಶ್ ಪರಮವೀರ ಚಕ್ರ ಪುರಸ್ಕೃತ, ಹುತಾತ್ಮ ಕ್ಯಾಪ್ಟನ್ ವಿಕ್ರಮ್ ಬಾತ್ರಾ ಅವರ ಭಾವಚಿತ್ರವನ್ನು ನೀರಿನಲ್ಲಿ ಟೈಲ್ಸ್ ಬಳಸಿ ಬಿಡಿಸಲಾಗಿದ್ದು, ಯುಆರ್‌ಎಫ್ (ಯುನಿವರ್ಸಲ್ ರೆಕಾರ್ಡ್ಸ್ ಫೋರಂ) ವಿಶ್ವ ದಾಖಲೆಗೆ ಪಾತ್ರವಾಗಿದೆ. ನೀರಿನೊಳಗೆ 1,500 ಚದರ ಅಡಿ ವಿಕ್ರಮ್ ಬಾತ್ರಾ ಅವರ ಭಾವಚಿತ್ರ ಪೂರ್ಣಗೊಳಿಸಲು ಎಂಟು ಗಂಟೆಗಳ ಸಮಯ ತೆಗೆದುಕೊಳ್ಳಲಾಯಿತು. ಸ್ಥಳದಲ್ಲಿ ಉಪಸ್ಥಿತರಿದ್ದ ಯುಆರ್‌ಎಫ್ ಅಧಿಕಾರಿಗಳು ಪ್ರಮಾಣಪತ್ರವನ್ನು ಕಲಾವಿದ ಸುರೇಶ್ ಅವರಿಗೆ ವಿತರಿಸಿದರು.
Last Updated : Feb 3, 2023, 8:25 PM IST