ದಿಢೀರ್ ಬಾಯ್ತೆರೆದ ದೆಹಲಿಯ ರಸ್ತೆ! ಅವ್ಯವಸ್ಥೆಗೆ ಸಾರ್ವಜನಿಕರ ಆಕ್ರೋಶ- ವಿಡಿಯೋ - ETV Bharath Kannada news
ನವದೆಹಲಿ:ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಂದು ಬೆಳಗ್ಗೆ ರಸ್ತೆ ಮಧ್ಯೆ ಏಕಾಏಕಿ ಬೃಹತ್ ಹೊಂಡ ನಿರ್ಮಾಣವಾಯಿತು. ಜನಕ್‌ಪುರಿ ಪ್ರದೇಶದ ರಸ್ತೆಯಲ್ಲಿ ಘಟನೆ ಸಂಭವಿಸಿದ್ದು ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ವರದಿಯಾಗಿದೆ. ನಗರದ ರಸ್ತೆಗಳಲ್ಲಿ ಈ ರೀತಿ ದಿಢೀರ್ ಗುಂಡಿ ಬೀಳಲು ಕಾರಣವೇನು ಎಂದು ತಿಳಿದುಬಂದಿಲ್ಲ. ಬಾಯ್ತೆರೆದ ರಸ್ತೆ ಮಧ್ಯೆ ಒಳಚಂರಂಡಿಯೂ ಇಲ್ಲ. ಹೀಗಿದ್ದೂ ಹೊಂಡ ಕಾಣಿಸಿಕೊಳ್ಳಲು ಕಾರಣ ಏನು ಎಂಬುದೇ ಪ್ರಶ್ನೆ. ಒಮ್ಮೆಗೆ ಮಣ್ಣು ಸಡಿಲಗೊಂಡು ಕುಸಿದಂತೆ ಕಂಡುಬರುತ್ತಿದೆ. ಪೊಲೀಸರು ಸುತ್ತಲೂ ಬ್ಯಾರಿಕೇಡ್ಗಳಿಂದ ಜನಸಂಚಾರ ನಿರ್ಬಂಧಿಸಿದ್ದಾರೆ.
ರಾಷ್ಟ್ರ ರಾಜಧಾನಿಯಲ್ಲಿ ಕಳೆದೆರಡು ದಿನಗಳಿಂದ ಭಾರಿ ಮಳೆಯಾಗುತ್ತಿದ್ದು, ಇದರಿಂದಾಗಿ ಮಣ್ಣು ಸಡಿಲಗೊಂಡು ರಸ್ತೆ ಕುಸಿದಿದೆ ಎನ್ನಲಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಸ್ಥಳೀಯ ಆಡಳಿತದ ವಿರುದ್ಧ ಟೀಕೆಗಳು ಕೇಳಿಬರುತ್ತಿವೆ. ಕಳೆದ ಇಪ್ಪತ್ನಾಲ್ಕು ಗಂಟೆಗಳಲ್ಲಿ ಅಂದರೆ ಬುಧವಾರ ಬೆಳಗ್ಗೆ 8:30 ರವರೆಗೆ ದೆಹಲಿಯಲ್ಲಿ 0.2 ಮಿ.ಮೀ ಮಳೆ ದಾಖಲಾಗಿದೆ. ಮೋಹನ್ ಗುಪ್ತಾ ಎಂಬವರು ದೆಹಲಿ ಉತ್ತಮವಾಗಿದೆ ಎಂದು ವ್ಯಂಗ್ಯವಾಗಿ ಟೀಕಿಸಿ ವಿಡಿಯೋ ಟ್ಯಾಗ್ ಮಾಡಿದ್ದಾರೆ.
ಇದನ್ನೂ ಓದಿ:Dakshina Kannada Rain: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಗೆ ಓರ್ವ ಬಲಿ: ರೆಡ್ ಅಲರ್ಟ್, ಶಾಲೆಗಳಿಗೆ ರಜೆ ಘೋಷಣೆ