ಶ್ರಾವಣ ಮಾಸದಲ್ಲಿ ಕೇದಾರನಾಥನ ಸನ್ನಿಧಿಗೆ ಹರಿದು ಬರುತ್ತಿದೆ ಭಕ್ತರ ದಂಡು - ಕೇದಾರನಾಥದಲ್ಲಿ ಶ್ರಾವಣ ಮಾಸದ ಆಚರನೆ
ರುದ್ರಪ್ರಯಾಗ: ದ್ವಾದಶ ಜ್ಯೋತಿರ್ಲಿಂಗಳಲ್ಲಿ ಒಂದಾದ ಕೇದಾರನಾಥನ ಸನ್ನಿಧಿಗೆ ಭಕ್ತರ ದಂಡೇ ಹರಿದು ಬರುತ್ತಿದೆ. ಮಳೆಯ ಹೊರತಾಗಿಯೂ ಕೇದಾರನಾಥಕ್ಕೆ ಭೇಟಿ ನೀಡುವ ಯಾತ್ರಾರ್ಥಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ದಿನಕ್ಕೆ 10ರಿಂದ 12 ಸಾವಿರ ಭಕ್ತರು ಕೇದಾರನಾಥನ ದರ್ಶನಕ್ಕೆ ಆಗಮಿಸುತ್ತಿದ್ದಾರೆ. ಕೊರೊನಾ ನಂತರ ಕೇದಾರನಾಥನ ಸನ್ನಿಧಿ ತೆರೆದು ಮೂರು ತಿಂಗಳು ಕಳೆದಿಲ್ಲ, ಅದಾಗಲೇ 9,41,794 ಯಾತ್ರಾರ್ಥಿಗಳು ಈ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಶ್ರಾವಣ ಮಾಸದಲ್ಲಿ ಕೇದಾರನಾಥನ ಸನ್ನಿಧಿಯಲ್ಲಿ ಭಕ್ತರ ದಂಡೇ ನೆರೆದಿರುತ್ತದೆ. ಯಾತ್ರಿಕರು ದೀರ್ಘವಾದ ಕಾಯುವಿಕೆಯ ಬಳಿಕ ಕೇದಾರನಾಥನ ದರ್ಶನ ಪಡೆಯುತ್ತಿದ್ದಾರೆ. ಇಡೀ ಕೇದಾರನಗರಿ ಜೈ ಕೇದಾರ ಘೋಷಣೆ ಅನುರಣಿಸುತ್ತಿದೆ.
Last Updated : Feb 3, 2023, 8:25 PM IST