ಜಮ್ಮು ಕಾಶ್ಮೀರದಲ್ಲಿ ಭೂ ಕುಸಿತ; 2 ಮನೆ, ಅಂಗಡಿಗೆ ಹಾನಿ - ಜಮ್ಮು ಕಾಶ್ಮೀರದ ದಮ್ಹಾಲ್ ಹಂಜಿಪುರದಲ್ಲಿ ಭೂ ಕುಸಿತ
ಹಂಜಿಪುರ (ಜಮ್ಮು ಕಾಶ್ಮೀರ): ಕುಲ್ಗಾಂ ಜಿಲ್ಲೆಯ ದಮ್ಹಾಲ್, ಹಂಜಿಪುರ, ನೂರಾಬಾದ್ ಶಾಲಂಚಿ ಯರಿಖಾ ಪ್ರದೇಶದಲ್ಲಿ ಇಂದು ಭೂ ಕುಸಿತ ಸಂಭವಿಸಿತು. ಎರಡು ಮನೆ ಹಾಗೂ ಅಂಗಡಿಗಳಿಗೆ ಹಾನಿಯಾಗಿದೆ. ನೂರಾಬಾದ್‌ನ ಶಾಲಂಚಿ ಯರಿಖಾ ಎಂಬಲ್ಲಿ ಗುಡ್ಡ ಕುಸಿತವಾಗಿ ಫಯಾಜ್ ಅಹ್ಮದ್ ಹಿಜಾಮ್ ಮತ್ತು ಅಬ್ದುಲ್ ಮಜೀದ್ ಹಿಜಾಮ್ ಎಂಬವರಿಗೆ ಸೇರಿದ ಮೂರು ಅಂಗಡಿಗಳಿಗೆ ಭಾಗಶ: ಹಾನಿಯಾಗಿದೆ ಎಂದು ದಮ್ಹಾಲ್ ಹಂಜಿಪುರದ ತಹಸೀಲ್ದಾರ್ ತಿಳಿಸಿದ್ದಾರೆ.
ಮನೆಗಳು ಸಹ ಸ್ವಲ್ಪ ಮಟ್ಟಿಗೆ ಹಾನಿಗೊಳಗಾಗಿವೆ. ಕುಲ್ಗಾಮ್ ಜಿಲ್ಲಾಡಳಿತವು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದೆ. ಸಂತ್ರಸ್ತ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಅವಶೇಷಗಳಿಂದ ಹಾನಿಗೊಳಗಾದ ರಸ್ತೆಯ ದುರಸ್ತಿಗೆ ಕಾರ್ಮಿಕರು ಮತ್ತು ಯಂತ್ರೋಪಕರಣಗಳನ್ನು ನಿಯೋಜಿಸಲಾಗಿದೆ. ಈ ಪ್ರದೇಶದಲ್ಲಿ ನೀರು ಸರಬರಾಜು ಮಾಡುವ ಮಾರ್ಗ ಸಂಪೂರ್ಣ ಹದಗೆಟ್ಟಿದೆ. ಸಂತ್ರಸ್ತರಿಗೆ ನೆರವು ನೀಡಲಾಗುವುದು ಎಂದು ಅಧಿಕಾರಿ ಹೇಳಿದ್ದಾರೆ.
ಇದನ್ನೂಓದಿ:ಬಹುಕೋಟಿ ವಂಚಕ ಸುಕೇಶ್ ಜೈಲಿನ ಕೊಠಡಿಯಲ್ಲಿ ಐಷಾರಾಮಿ ವಸ್ತುಗಳು ಪತ್ತೆ