ಕರ್ನಾಟಕ

karnataka

ಕೆಸರು ಮಣ್ಣಿನ ಜೊತೆ ಕೊಚ್ಚಿ ಹೋದ ಕಾರು

ETV Bharat / videos

ಅರುಣಾಚಲ ಪ್ರದೇಶದಲ್ಲಿ ಭೂಕುಸಿತ: ಕೆಸರು ಮಣ್ಣಿನ ಜೊತೆ ಕೊಚ್ಚಿ ಹೋದ ಕಾರು.. ವಿಡಿಯೋ

By

Published : Jul 29, 2023, 1:05 PM IST

ಜೋನೈ (ಅರುಣಾಚಲ ಪ್ರದೇಶ): ಭಾರತದ ಸೂರ್ಯೋದಯದ ರಾಜ್ಯ ಅರುಣಾಚಲ ಪ್ರದೇಶದಲ್ಲಿ ಕಳೆದ ಮೂರು ದಿನಗಳಿಂದ ಭಾರೀ ಮಳೆಯಾಗುತ್ತಿದೆ. ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ರಾಜ್ಯದಲ್ಲಿ ಹಲವೆಡೆ ಭೂಕುಸಿತ ಉಂಟಾಗಿದೆ. ಇಂದು ಬೆಳಗ್ಗೆ ಎನ್​ಎಚ್​ 513ರಲ್ಲಿ ಭೂಕುಸಿತ ಸಂಭವಿಸಿದೆ. ಭೂಕುಸಿತಕ್ಕೆ ರಸ್ತೆಯಲ್ಲಿ ಚಲಿಸುತ್ತಿದ್ದ ಕಾರೊಂದು ಕೆಸರು ಮಣ್ಣಿನ ಜೊತೆ ಕೊಚ್ಚಿಕೊಂಡು ಹೋಗಿರುವ ಘಟನೆ ನಡೆದಿದೆ.

ರಸ್ತೆಯಲ್ಲಿ ಕಾರು ಹಾಗೂ ಪಿಕಪ್​ ವಾಹನ ಚಲಿಸುತ್ತಿದ್ದು, ಭೂಕುಸಿತ ಆಗುತ್ತಿರುವುದನ್ನು ಕಂಡೊಡನೆ ಪಿಕಪ್​ ವಾಹನ ಹಿಂದೆ ಸರಿದಿದೆ. ಕಾರು ಹಿಂದೆ ಸರಿಯಲು ಪ್ರಯತ್ನಿಸಿದ್ದು, ಸಾಧ್ಯವಾಗದೆ ಕಾರಿನಲ್ಲಿ ಹಿಂದೆ ಕುಳಿತಿದ್ದ ಒಬ್ಬ ವ್ಯಕ್ತಿ ಕಾರಿನಿಂದ ಇಳಿದು, ಹಿಂದೆ ಓಡಿ ಬಂದಿದ್ದಾನೆ. ಆದರೆ ಕಾರಿನಲ್ಲಿದ್ದ ಇನ್ನೂ ಇಬ್ಬರು ಇಳಿಯುವ ಮುನ್ನವೇ ಅದು ರಭಸವಾದ ನೀರಿನೊಂದಿಗೆ ಹರಿದು ಬಂದ ಮಣ್ಣಿನ ಜೊತೆ ಕೊಚ್ಚಿ ಹೋಗಿದೆ. ಕಾರು ಕೊಚ್ಚಿಕೊಂಡು ಹೋಗುತ್ತಿದ್ದಾಗಲೇ ಕಾರಿನಲ್ಲಿದ್ದ ಇಬ್ಬರು ಹೊರಗೆ ಬಂದಿದ್ದಾರೆ. ಆ ವೇಳೆಗೆ ಕಾರು ಅರ್ಧದಲ್ಲೇ ಸಿಲುಕಿಕೊಂಡಿದೆ. ಈ ಬಗ್ಗೆ ರಕ್ಷಣಾ ತಂಡಕ್ಕೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಧಾವಿಸಿದ ರಕ್ಷಣಾ ತಂಡ ಕಾರನ್ನು ರಕ್ಷಿಸಿದೆ. 

ಅರುಣಾಚಲ ಪ್ರದೇಶದ ಪಾಸಿಘಾಟ್ ಮತ್ತು ಯಿಂಗ್‌ಕಾಂಗ್‌ಗೆ ಸಂಪರ್ಕ ಕಲ್ಪಿಸುವ ರಸ್ತೆಯ ರಿಬಿಕರೆಂಗ್‌ನಲ್ಲಿ ಭೂಕುಸಿತ ಸಂಭವಿಸಿದ್ದು, ಪಾಸಿಘಾಟ್ ಮತ್ತು ಯಿಂಗ್‌ಕಾಂಗ್ ನಡುವಿನ ಸಂಪರ್ಕಕ್ಕೆ ತೊಂದರೆಯಾಗಿದೆ. ಅರುಣಾಚಲ ಪ್ರದೇಶದ ರುಕ್ಚಿನ್, ಪಾಸಿಘಾಟ್, ಬಡಾಂಗ್, ಚಿಲ್ಲಿ ಜೀಂಗ್, ಪಡು, ಡಮರ್, ಯೊಂಗ್‌ಕಾಂಗ್ ಮರಿಯಾಂಗ್ ರಸ್ತೆ ಸಂಪರ್ಕ ಕಡಿತಗೊಂಡಿದೆ.

ಇದನ್ನೂ ನೋಡಿ:ಸೌಂದರ್ಯದ ರಾಶಿ ಚಿಕ್ಕಮಗಳೂರು ಚಾರ್ಮಾಡಿ ಘಾಟಿ.. ಕಾಫಿನಾಡಿನ ಕ್ಷೀರಧಾರೆಯ ವಿಡಿಯೋ ನೋಡಿ..

ABOUT THE AUTHOR

...view details