'ಇಂಡಿಯಾ' ಸಭೆಗೂ ಮುನ್ನ ಮುಂಬೈನ ಪ್ರಸಿದ್ಧ ಸಿದ್ಧಿವಿನಾಯಕನ ದರ್ಶನ ಪಡೆದ ಲಾಲು: ವಿಡಿಯೋ - ವಿಘ್ನ ನಿವಾರಕನಿಗೆ ವಿಶೇಷ ಪೂಜೆ
Published : Aug 31, 2023, 8:07 PM IST
ಮುಂಬೈ (ಮಹಾರಾಷ್ಟ್ರ): ದೇಶದ ವಾಣಿಜ್ಯ ನಗರಿ ಹಾಗು ಮಹಾರಾಷ್ಟ್ರದ ರಾಜಧಾನಿ ಮುಂಬೈನಲ್ಲಿ ಇಂದು ಮತ್ತು ನಾಳೆ ಕಾಂಗ್ರೆಸ್ ಹಾಗೂ ಇತರ ಪ್ರತಿಪಕ್ಷಗಳ 'ಇಂಡಿಯಾ' ಮೈತ್ರಿಕೂಟದ ಸಭೆ ಆಯೋಜಿಸಲಾಗಿದೆ. ಈ ಸಭೆಯಲ್ಲಿ ಪಾಲ್ಗೊಳ್ಳಲು ನಗರಕ್ಕೆ ಆಗಮಿಸಿರುವ ರಾಷ್ಟ್ರೀಯ ಜನತಾ ದಳ (ಆರ್ಜೆಡಿ) ಮುಖ್ಯಸ್ಥ, ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಇಂದು ಪ್ರಸಿದ್ಧ ಸಿದ್ಧಿ ವಿನಾಯಕನ ದರ್ಶನ ಪಡೆದರು.
ಲಾಲು ಪ್ರಸಾದ್ ತಮ್ಮ ಪುತ್ರ, ಬಿಹಾರ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರೊಂದಿಗೆ ದೇವಸ್ಥಾನಕ್ಕೆ ಭೇಟಿ ನೀಡಿದರು. ವಿಘ್ನ ನಿವಾರಕನಿಗೆ ವಿಶೇಷ ಪೂಜೆ ಸಲ್ಲಿಸಿದ ಲಾಲು, ಅರ್ಚಕರಿಂದ ಆಶೀರ್ವಾದ ಪಡೆದರು. ಪುತ್ರಿ ಮಿಸಾ ಭಾರತಿ ಹಾಗೂ ಇತರ ಪ್ರಮುಖರು ಜೊತೆಗಿದ್ದರು.
ಸಭೆಗೆ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ತೇಜಸ್ವಿ ಯಾದವ್, ''ಇಂಡಿಯಾ' ಮೈತ್ರಿಕೂಟದಿಂದ ಯಾರೇ ಪ್ರಧಾನಿ ಅಭ್ಯರ್ಥಿಯಾದರೂ ಅವರು ಪ್ರಸ್ತುತ ಪ್ರಧಾನಿ ನರೇಂದ್ರ ಮೋದಿಯವರಿಗಿಂತ ಉತ್ತಮರು, ಸತ್ಯವಂತರು, ಪ್ರಾಮಾಣಿಕರು ಮತ್ತು ಜನರಿಗೆ ನಿಷ್ಠರಾಗಿರುತ್ತಾರೆ'' ಎಂದರು. ಅಲ್ಲದೇ, ''ಎಲ್‌ಪಿಜಿ ಸಿಲಿಂಡರ್ ಬೆಲೆ 200 ರೂ. ಕಡಿತ ಮಾಡಿರುವ ಕೇಂದ್ರ ಸರ್ಕಾರದ್ದು ಚುನಾವಣಾ ಸ್ಟಂಟ್ ಅಷ್ಟೇ. ನಿಮ್ಮ ಜೇಬಿನಿಂದ 5,000 ರೂಪಾಯಿ ತೆಗೆದು 200 ರೂಪಾಯಿ ಹಿಂತಿರುಗಿಸಿದರೆ, ಅದು ನಿಮಗೆ ಲಾಭವೋ, ನಷ್ಟವೋ ಹೇಳಿ'' ಎಂದು ಮಾಧ್ಯಮದವರನ್ನು ಪ್ರಶ್ನಿಸಿದರು.
ಇದನ್ನೂ ಓದಿ:ನಾವು ನರೇಂದ್ರ ಮೋದಿ ಕುತ್ತಿಗೆ ಹಿಡಿದಿದ್ದೇವೆ, ಅವರನ್ನು ಅಧಿಕಾರದಿಂದ ತೆಗೆದುಹಾಕಬೇಕಿದೆ: ಲಾಲು ಪ್ರಸಾದ್