ನಗಬೇಡಿ, ನಾನು ಅಜ್ಜಿ ಆಗುತ್ತಿದ್ದೇನೆ: ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ - ETV Bharath Kannada news
ಚಿಕ್ಕಮಗಳೂರು:ಜಿಲ್ಲೆಯ ಮೂಡಿಗೆರೆ ತಾಲೂಕಿನ ಹಾಂದಿ ಗ್ರಾಮದಲ್ಲಿ ವಿನಯ್ ಗುರೂಜಿಯವರ ಬಗ್ಗೆ ಮಾತನಾಡಿದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್, ವಿನಯ್ ಗೂರೂಜಿ ಹೇಳಿದಂತೆ ಆಗುತ್ತೆ. ನನ್ನ ಸೊಸೆ ಮನೆಯಲ್ಲಿ ಸೀಮಂತಕ್ಕೆ ಬರುತ್ತೇನೆ ಎಂದಿದ್ದರು. ಆಗ ನಮಗೆ ಏನೂ ಗೊತ್ತಿರಲಿಲ್ಲ. ಅವರು ಹೇಳಿದ ಮೂರೇ ದಿನಕ್ಕೆ ಸೊಸೆ ಕನ್ಸೀವ್ ಆಗಿದ್ದಳು. ನೀವು ನಗಬೇಡಿ, ನಾನು ಅಜ್ಜಿ ಆಗುತ್ತಿದ್ದೇನೆ. ಅದಕ್ಕೆ ಈಗಲೇ ವಿನಯ್ ಗೂರೂಜಿಗೆ ಆಹ್ವಾನ ನೀಡುತ್ತೇನೆ ಎಂದು ವೇದಿಕೆ ಮೇಲೆಯೇ ಸೊಸೆ ಸೀಮಂತಕ್ಕೆ ವಿನಯ್ ಗುರೂಜಿಗೆ ಆಹ್ವಾನ ನೀಡಿದ್ದಾರೆ.
ನಿನ್ನೆ ಹಾಂದಿ ಗ್ರಾಮದಲ್ಲಿ ಆಶಾ ಕಾರ್ಯಕರ್ತೆಯರಿಗಾಗಿ ನಯನ ಮೋಟಮ್ಮ ಆಶಾ ಕಿರಣ ಕಾರ್ಯಕ್ರಮ ಆಯೋಜನೆ ಮಾಡಿದ್ದು, ಈ ಕಾರ್ಯಕ್ರಮದ ವಿಶೇಷ ಅತಿಥಿಯಾಗಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಪಾಲ್ಗೊಂಡಿದ್ದರು. ಈ ವೇಳೆ, ಮಹಿಳೆ ಅಂದರೆ ಸಂಘರ್ಷ. ಅದು ಮಹಿಳೆಯ ಜೊತೆಯೇ ಬರುತ್ತೆ. ಹುಟ್ಟಿನಿಂದ ಸಾಯೋವರೆಗೂ ಪರೀಕ್ಷೆಗಳನ್ನು ಹೊತ್ತುಕೊಂಡೇ ಇರಬೇಕು, ಎದುರಿಸಬೇಕು, ಗೆಲ್ಲಬೇಕು ಎಂದರು.
ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ ಮುಂದಿನ ಮೂರು ತಿಂಗಳು ಕೆಟ್ಟದ್ದನ್ನು ನೋಡಲ್ಲ, ಕೇಳಲ್ಲ, ಮಾತನಾಡಲ್ಲ. ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಖಚಿತ. ಬಹಳ ಸಹನೆ, ತಾಳ್ಮೆಯಿಂದ ಚುನಾವಣೆ ಎದುರಿಸಬೇಕಾಗಿದೆ ಎಂದು ರಮೇಶ್ ಜಾರಕಿಹೊಳಿ ಅವರು ಸಿಡಿ ವಿಚಾರದ ಆರೋಪಕ್ಕೆ ಪ್ರತಿಕ್ರಿಯೆ ನೀಡಲ್ಲ ಎಂದರು.
ಇದನ್ನೂ ಓದಿ:ಕೆಟ್ಟದ್ದನ್ನ ನೋಡಲ್ಲ, ಕೇಳಲ್ಲ, ಮಾತಾಡಲ್ಲ : ಲಕ್ಷ್ಮಿ ಹೆಬ್ಬಾಳ್ಕರ್ ಶಪಥ