ಬತ್ತಿದ ಘಟಪ್ರಭಾ ನದಿ; ನೀರಿಲ್ಲದೇ ಲಕ್ಷ ಲಕ್ಷ ಮತ್ಸ್ಯಗಳ ಮಾರಣಹೋಮ - ವಿಡಿಯೋ
ಬೆಳಗಾವಿ:ರಾಜ್ಯದಲ್ಲಿ ಮುಂಗಾರು ಚುರುಕುಗೊಂಡಿದೆ. ಆದರೆ, ಈ ಬಾರಿ ಮುಂಗಾರು ಮಳೆ ತಡವಾಗಿ ಶುರುವಾಗಿದ್ದು, ಮಳೆಯ ಅಭಾವದಿಂದ ನದಿಗಳೆಲ್ಲ ಬತ್ತಿ ಜಲಚರಗಳಿಂದ ಹಿಡಿದು, ಮಾನವರವರೆಗೂ ಕುಡಿಯಲು ನೀರಿಗೆ ಪರದಾಡುವ ಪರಿಸ್ಥಿತಿ ಒದಗಿ ಬಂದಿದೆ. ಕಳೆದ ಎರಡು-ಮೂರು ದಿನಗಳಿಂದಮಳೆಯೇನೋ ಆಗುತ್ತಿದೆ. ಆದರೆ ವರುಣ ತಡವಾಗಿ ಬಂದಿದ್ದರ ಪರಿಣಾಮ ನೀರಿಲ್ಲದೇ ಬತ್ತಿ ಹೋಗಿದ್ದ ಘಟಪ್ರಭಾ ನದಿಯಲ್ಲಿ ಲಕ್ಷ ಲಕ್ಷ ಮೀನುಗಳು ಸಾವನ್ನಪ್ಪಿವೆ. ಹೌದು, ಮಳೆಯ ಅಭಾವದಿಂದ ಘಟಪ್ರಭಾ ನದಿಯಲ್ಲಿ ಲಕ್ಷಾಂತರ ಮೀನುಗಳ ಮಾರಣ ಹೋಮವಾಗಿದೆ.
ಗೋಕಾಕ್ ತಾಲೂಕಿನ ನಲ್ಲಾನಟ್ಟಿ, ಬಳೋಬಾಳ, ಬೀರನಗಟ್ಟಿ ಗ್ರಾಮಗಳ ಬಳಿ ಘಟಪ್ರಭಾ ನದಿಯಲ್ಲಿ ರಾಶಿ ರಾಶಿ ಮೀನುಗಳು ಸತ್ತು ಬಿದ್ದಿರುವ ದೃಶ್ಯ ಕಂಡು ಬಂದಿದೆ. ನೀರು ಇಲ್ಲದೇ ಬಾಯಿ ಬಿಟ್ಟು ನರಳಾಡಿ ಮೀನುಗಳು ಕೊನೆಗೆ ಉಸಿರು ಚೆಲ್ಲಿವೆ. ಕೆಸರಿನಲ್ಲಿ ಮೀನುಗಳು ವಿಲವಿಲ ಒದ್ದಾಡುತ್ತಿರುವ ದೃಶ್ಯ ಮನಕಲಕುವಂತಿತ್ತು. ಲಕ್ಷಾಂತರ ಮೀನುಗಳು ಸತ್ತಿರುವುದರಿಂದ ನದಿಯಲ್ಲಿ ದುರ್ವಾಸನೆ ಬೀರುತ್ತಿದ್ದು, ನದಿ ತೀರದ ಗ್ರಾಮಗಳಲ್ಲಿ ರೋಗ ಹರಡುವ ಭೀತಿ ಶುರುವಾಗಿದೆ. ಒಟ್ಟಾರೆ ನದಿಗಳಲ್ಲಿ ನೀರಿಲ್ಲದೇ ಜಲಚರಗಳು ಸಾವನ್ನಪ್ಪುತ್ತಿದ್ದು, ಹೀಗೆ ಮಳೆಯಾಗದೇ ಹೋದರೆ ಪರಿಸ್ಥಿತಿ ಮತ್ತಷ್ಟು ಹದಗೆಡುವ ಸಾಧ್ಯತೆಯಿದೆ.
ಇದನ್ನೂ ಓದಿ:ನೈರುತ್ಯ ಮಾನ್ಸೂನ್ ಚುರುಕು.. ಕರ್ನಾಟಕ ಸೇರಿದಂತೆ ದೇಶದ ಇತರ ಭಾಗಗಳಲ್ಲಿ ಭಾರಿ ಮಳೆ ಸಾಧ್ಯತೆ