ಬರದ ನಾಡಿನಲ್ಲಿ ಭಾರಿ ಮಳೆ.. 89 ವರ್ಷಗಳ ನಂತರ ಭರ್ತಿಯಾದ ವಿವಿ ಸಾಗರ! - ಚೆಕ್ ಡ್ಯಾಂಗಳು ಭರ್ತಿ
ಚಿತ್ರದುರ್ಗ: ಎರಡು ದಿನಗಳಿಂದ ಸುರಿದ ಭಾರಿ ಮಳೆಗೆ ಕೆರೆ ಕಟ್ಟೆಗಳು ಭರ್ತಿಯಾಗಿರುವ ಹಿನ್ನೆಲೆ ನದಿ ಪಾತ್ರದ ಗ್ರಾಮಗಳಲ್ಲಿ ವಾಸ ಮಾಡುವ ಜನರು ಎಚ್ಚರವಾಗಿರಬೇಕೆಂದು ಜಿಲ್ಲಾಡಳಿತ ಸೂಚನೆ ನೀಡಿದೆ. ವೇದಾವತಿ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದ್ದು, ಜನ್ರು ನೀರಿಗಿಳಿಯದಂತೆ ಸೂಚಿಸಲಾಗಿದೆ. ಹೊಸಕೆರೆ, ಶಿಡ್ಲಯ್ಯನಕೋಟೆ, ಹೊಸಹಳ್ಳಿ, ಚೌಳೂರು ಪರಶುರಾಂಪುರ ಗ್ರಾಮಗಳ ಬಳಿ ಇರುವ ಸೇತುವೆಗಳು ಭಾರಿ ಪ್ರಮಾಣದ ನೀರು ಹರಿಯುತ್ತಿದ್ದು, ನೀರು ನೋಡಲು ಜನ್ರು ಸಾಗರೋಪಾದಿಯಲ್ಲಿ ಬರುತ್ತಿದ್ದಾರೆ. ವಿವಿ ಸಾಗರ ಭರ್ತಿಯಾಗಿ 89 ವರ್ಷಗಳ ನಂತರ ಕೋಡಿ ಬಿದ್ದಿದೆ. ಹೀಗಾಗಿ ವಿವಿ ಸಾಗರ ಸುತ್ತಮುತ್ತ ಪೊಲೀಸ್ ನಿಯೋಜನೆ ಮಾಡಲಾಗಿದೆ. ವೇದಾವತಿ ನದಿಗೆ ಅಡ್ಡಲಾಗಿ ನಿರ್ಮಿಸಿರಿವ ಬಹುತೇಕ ಚೆಕ್ ಡ್ಯಾಂಗಳು ಭರ್ತಿಯಾಗಿ ಕೋಡಿ ಬಿದ್ದಿರುವುದು ಸಂತಸ ಮೂಡಿಸಿದೆ.
Last Updated : Feb 3, 2023, 8:27 PM IST