ಕರ್ನಾಟಕ

karnataka

ETV Bharat / videos

ವ್ಹೀಲಿಂಗ್ ಮಾಡಲು ಹೋಗಿ ಮಹಿಳೆಗೆ ಗುದ್ದಿದ ಯುವಕರು! - bike wheeling accident

By

Published : Apr 9, 2022, 7:55 PM IST

ಬೆಂಗಳೂರು : ಯುವಕರ ವ್ಹೀಲಿಂಗ್ ಶೋಕಿಗೆ ಮಹಿಳೆಯೊಬ್ಬರು ಗಾಯಗೊಂಡ ಘಟನೆ ಗೋರಿಪಾಳ್ಯದ ನರಸಿಂಹ ಸ್ವಾಮಿ ದೇವಾಲಯದ ಬಳಿ ನಡೆದಿದೆ. ಬುಧವಾರ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ವ್ಹೀಲಿಂಗ್ ಮಾಡಿಕೊಂಡು ಬಂದ ಇಬ್ಬರು ಯುವಕರು ರಸ್ತೆ ಪಕ್ಕದಲ್ಲಿ ಹೋಗುತ್ತಿದ್ದ ಮಹಿಳೆ ಮೇಲೆ ಬೈಕ್ ಬೀಳಿಸಿದ್ದಾರೆ. ಇದರ ಪರಿಣಾಮ ಮಹಿಳೆಯ ತಲೆ‌ ಮತ್ತು ಬೆನ್ನಿಗೆ ಗಾಯಗಳಾಗಿದ್ದು, ಬೈಕ್ ಸಮೇತ ಆರೋಪಿಗಳು ಪರಾರಿಯಾಗಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸದ್ಯ ಮಹಿಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ABOUT THE AUTHOR

...view details