ಕರ್ನಾಟಕ

karnataka

ಹಾವೇರಿ ಮಂದಿ

ETV Bharat / videos

ಗೃಹಲಕ್ಷ್ಮಿ ಯೋಜನೆ ನೋಂದಣಿಗೆ ಸೇವಾಕೇಂದ್ರಗಳ ಕೊರತೆ.. ದಿನವಿಡಿ ಕ್ಯೂ ನಲ್ಲಿ ನಿಂತು ಸುಸ್ತಾದ ಹಾವೇರಿ ಮಂದಿ-ವಿಡಿಯೋ - ಸಿಎಂ ಸಿದ್ದರಾಮಯ್ಯ

By

Published : Jul 22, 2023, 7:52 AM IST

Updated : Jul 22, 2023, 7:59 AM IST

ಹಾವೇರಿ:ರಾಜ್ಯ ಸರ್ಕಾರ ಘೋಷಣೆ ಮಾಡಿದ್ದ ತನ್ನ ಗ್ಯಾರಂಟಿ ಯೋಜನೆಗಳನ್ನು ಒಂದೊಂದಾಗಿ ಅನುಷ್ಠಾನ ಮಾಡುತ್ತಿದೆ. ಸರ್ಕಾರದ ಪ್ರಮುಖ ಗ್ಯಾರಂಟಿ ಯೋಜನೆಯಾಗಿರುವ ಗೃಹಲಕ್ಷ್ಮಿ ಯೋಜನೆಗೆ ಈಗಾಗಲೇ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದ್ದಾರೆ. ಇದರ ಬೆನ್ನಲ್ಲಿಯೇ ಕರ್ನಾಟಕ ವನ್ ಗ್ರಾಮವನ್ ಬಾಪೂಜಿ ಸೇವಾಕೇಂದ್ರಗಳಲ್ಲಿ, ನಗರಸಭೆ, ಪುರಸಭೆಗಳಲ್ಲಿ ಸಹ ಗೃಹಲಕ್ಷ್ಮಿ ಯೋಜನೆಗೆ ನೋಂದಣಿ ಮಾಡಿಸಬಹುದು. 

ಹಾವೇರಿ ನಗರದಲ್ಲಿ ಬೆರಳೆಣಿಕೆಯಷ್ಟು ಕರ್ನಾಟಕ ವನ್ ಕೇಂದ್ರಗಳಿದ್ದು ಮಹಿಳೆಯರು ಈ ಕೇಂದ್ರಗಳಲ್ಲಿ ನೋಂದಣಿ ಮಾಡಿಸಲು ಮುಗಿಬಿದಿದ್ದಾರೆ. ನಗರದ ಗುರುಭವನದ ಪಕ್ಕದಲ್ಲಿ ಕರ್ನಾಟಕ ವನ್ ಕೇಂದ್ರದಲ್ಲಿ ವಯೋವೃದ್ಧರು, ಮಹಿಳೆಯರು ಶುಕ್ರವಾರ ಮುಂಜಾನೆಯಿಂದಲೇ ಸರತಿಯಲ್ಲಿ ನಿಂತು ಗೃಹಲಕ್ಷ್ಮಿ ಯೋಜನೆಗೆ ನೋಂದಣಿ ಮಾಡಿಸುವ ದೃಶ್ಯ ಕಂಡುಬಂತು.

ಇದರ ನಡುವೆ ಸರ್ವರ್ ಸಮಸ್ಯೆ ಕಾಡುತ್ತಿದ್ದು ಗಂಟೆಗೆ ಒಬ್ಬರು ಅಥವಾ ಇಬ್ಬರು ನೋಂದಣಿ ಮಾಡಿಸುತ್ತಿದ್ದಾರೆ. ಮಳೆಗಾಲವಾಗಿದ್ದರಿಂದ ಮಳೆ ಸುರಿಯುತ್ತಿದೆ ಸರತಿಯಲ್ಲಿ ನಿಲ್ಲಲು ಸರಿಯಾದ ಜಾಗವಿಲ್ಲಾ. ವಯೋವೃದ್ಧರಿಗೆ ಕುಳಿತುಕೊಳ್ಳಲು ವ್ಯವಸ್ಥೆ ಇಲ್ಲಾ ಎಂದು ವೃದ್ಧೆಯರು ಆರೋಪಿಸಿದ್ದಾರೆ.

ವಯೋವೃದ್ಧರಿಗೆ ಪ್ರತ್ಯೇಕ ಸರತಿ ಮಹಿಳೆಯರಿಗೆ ಪ್ರತ್ಯೇಕ ಸರತಿ ಮತ್ತು ಇತರ ಕೆಲಸಗಳಿಗಾಗಿ ಕರ್ನಾಟಕ್ ವನ್‌ಗೆ ಆಗಮಿಸುವವರಿಗೆ ಪ್ರತ್ಯೇಕ ಸರತಿ ವ್ಯವಸ್ಥೆ ಮಾಡುವಂತೆ ಮಹಿಳೆಯರು ಒತ್ತಾಯಿಸಿದ್ದಾರೆ. ಇದರ ಜೊತೆ ಜೊತೆಗೆ ಖಾಸಗಿ ಸೇವಾ ಕೇಂದ್ರಗಳಲ್ಲಿ ಸಹ ನೋಂದಣಿ ಮಾಡಿಸಲು ಸರ್ಕಾರ ಅವಕಾಶ ಕಲ್ಪಿಸಬೇಕೆಂದು ಆಗ್ರಹಿಸುತ್ತಿದ್ದಾರೆ.

ಇದನ್ನೂ ಓದಿ:ಗೃಹಲಕ್ಷ್ಮಿಗೆ ನೋಂದಣಿ: ಮೈಸೂರಿನ ಕೆಲವು ಗ್ರಾಮ ಒನ್ ಸೇವಾ ಕೇಂದ್ರಗಳಲ್ಲಿ ಮಹಿಳೆಯರ ಪರದಾಟ

Last Updated : Jul 22, 2023, 7:59 AM IST

ABOUT THE AUTHOR

...view details