ಕರ್ನಾಟಕ

karnataka

ರೈತ ಉತ್ಪಾದಕರ ಪ್ರತಿಭಟನೆ

ETV Bharat / videos

ಕೃಷಿ ಮೇಳದಲ್ಲಿ ಸೌಲಭ್ಯದ ಜೊತೆ ಗ್ರಾಹಕರ ಕೊರತೆ: ರೈತ ಉತ್ಪಾದಕರ ಪ್ರತಿಭಟನೆ - ETV Bharat kannada News

By

Published : Mar 19, 2023, 10:55 PM IST

ಶಿವಮೊಗ್ಗ:ಕೃಷಿ ಮೇಳದಲ್ಲಿ ನೀರಿಕ್ಷಿಸಿದಷ್ಟು ಜನ ಬಾರದೆ ರೈತ ಉತ್ಪಾದಕರು, ಅಧಿಕಾರಿಗಳ ವಿರುದ್ದ ಪ್ರತಿಭಟನೆ ನಡೆಸಿದ್ದಾರೆ. ಶಿವಮೊಗ್ಗದ ನವಲೆಯ ಕೆಳದಿ ಶಿವಪ್ಪ‌ನಾಯಕ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾನಿಲಯದ ಕಾಲೇಜು ಆವರಣದಲ್ಲಿ ಮಾರ್ಚ್ 17 ರಿಂದ ನಾಲ್ಕು ದಿನಗಳ ಕಾಲ ಕೃಷಿ ಮೇಳ ನಡೆಯುತ್ತಿದೆ. ಈ ಕೃಷಿ ಮೇಳದಲ್ಲಿ ಸೌಲಭ್ಯ ಸಿಗದೇ ರೈತ ಮಾರಾಟಗಾರರು ಸಿಡಿದೆದ್ದು ಕಾರ್ಯಕ್ರಮ ಬಹಿಷ್ಕಾರ ಮಾಡಿದ ಘಟನೆ ನಡೆದಿದೆ.

ರಾಜ್ಯದ ನಾನಾ ಕಡೆಗಳಿಂದ ರೈತ ಉತ್ಪಾದಕರು ಬಂದು ಕೃಷಿ ಮೇಳದಲ್ಲಿ ಸ್ಟಾಲ್ ಹಾಕಿದ್ದರು. ಇವರಿಂದ ಸ್ಟಾಲ್ ಹಾಕಲು ಪ್ರತಿದಿನ 8 ಸಾವಿರ ಹಣ ಪಡೆದ ಆಡಳಿತ ಮಂಡಳಿ, ಅಧಿಕಾರಿ ಸೌಲಭ್ಯ ಕೊಡದೆ ಬೇಜವಾಬ್ದಾರಿ ತೋರಿದ್ದಾರೆ. ಹಾಗು ಆಯೋಜಕರು ಕೃಷಿ ಮೇಳದ ಬಗ್ಗೆ ರೈತರಿಗೆ ಮಾಹಿತಿ ನೀಡುವಲ್ಲಿ ವಿಫಲ ಆಗಿದ್ದಾರೆ. ಈಗಾಗಿಯೇ ಕೃಷಿ ಮೇಳಕ್ಕೆ ನಿರೀಕ್ಷಿತ ಪ್ರಮಾಣದಲ್ಲಿ ಜನರು ಭೇಟಿ ನೀಡಿಲ್ಲ. ವ್ಯಾಪಾರವು ಆಗದೇ ನಷ್ಟ ಉಂಟಾಗಿದೆ. ಹೀಗಾಗಿ ಸ್ಟಾಲ್ ಹಾಕಲು ಪಡೆದಿರುವ ಹಣವನ್ನು ಹಿಂತಿರುಗಿಸುವಂತೆ ಅಧಿಕಾರಿಗಳ ಜೊತೆ ರೈತ ಉತ್ಪಾದಕರು ವಾಗ್ವಾದ ನಡೆಸಿದರು. ಬಳಿಕ ರೊಚ್ಚಿಗೆದ್ದ ರೈತ ಉತ್ಪಾದಕರು ಆಕ್ರೋಶ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿ ವೇದಿಕೆ ಮೇಲೆ ಕುಳಿತು ಪ್ರತಿಭಟನೆ ನಡೆಸಿದರು.  

ಈ ವೇಳೆ ಖುದ್ದು ವಿವಿಯ ಕುಲಪತಿ ಡಾ.ಜಗದೀಶ್ ಸೇರಿದಂತೆ ಕಾಲೇಜಿನ ವಿವಿಧ ವಿಭಾಗದ ಮುಖ್ಯಸ್ಥರು ಆಗಮಿಸಿ, ರೈತ ಉತ್ಪಾದಕರ ಜೊತೆ ಮಾತುಕತೆ ನಡೆಸಿದರು. ಆದರೂ ರೈತ ಉತ್ಪಾದಕರು ಪಟ್ಟು ಬಿಡದೆ ಪ್ರತಿಭಟನೆ ನಡೆಸಿದರು. ನಂತರ ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ಶಾಂತಗೊಳಿಸಿದರು. ಕೃಷಿ ಮತ್ತು ತೋಟಗಾರಿಕ ವಿವಿಯು ಸಹ ಮೇಳದ ಬಗ್ಗೆ ಪ್ರಚಾರ ಮಾಡದೆ ಇರುವುದೇ ರೈತ ಉತ್ಪಾದಕರ ಕೋಪಕ್ಕೆ ಕಾರಣವಾಗಿದೆ.  

ಇದನ್ನೂ ಓದಿ :ಐನಾಪುರ ಕೃಷಿ ಮೇಳ: ಸಕ್ರಿಯವಾಗಿ ಪಾಲ್ಗೊಂಡ ಮಾಹಿತಿ ಪಡೆದ ರೈತರು

ABOUT THE AUTHOR

...view details