ಘಾಟಿ ಸುಬ್ರಮಣ್ಯದಲ್ಲಿ ಕುಮಾರ ಷಷ್ಠಿ ಸಂಭ್ರಮ: ವಿಡಿಯೋ - ಘಾಟಿ ಸುಬ್ರಮಣ್ಯದಲ್ಲಿ ಕುಮಾರ ಷಷ್ಠಿ ಸಂಭ್ರಮ
ದೊಡ್ಡಬಳ್ಳಾಪುರ:ದಕ್ಷಿಣ ಭಾರತದ ಪ್ರಮುಖ ನಾಗರಾಧನೆಯ ಕ್ಷೇತ್ರ ಘಾಟಿ ಸುಬ್ರಮಣ್ಯದಲ್ಲಿ ಇಂದು ಕುಮಾರ ಷಷ್ಠಿಯನ್ನ ಸಂಭ್ರಮದಿಂದ ಆಚರಿಸಲಾಯಿತು. 2022ರ ಸುಬ್ರಮಣ್ಯಸ್ವಾಮಿ ಬ್ರಹ್ಮರಥೋತ್ಸವನ್ನು ಡಿ.28 ರಂದು ಆಚರಣೆ ಮಾಡಲಾಗಿತ್ತು. ಚಂಪಾ ಷಷ್ಠಿಯಂದು ನಡೆದ ಬ್ರಹ್ಮರಥೋತ್ಸವದಲ್ಲಿ ಸಾವಿರಾರು ಭಕ್ತರು ಭಾಗವಹಿಸಿದ್ದರು. ಇದಾದ ಒಂದು ತಿಂಗಳ ಬಳಿಕ ಕುಮಾರ ಷಷ್ಠಿಯನ್ನು ಬಹಳ ಸಂಭ್ರಮದಿಂದ ಆಚರಣೆ ಮಾಡಲಾಯಿತು. ಕುಮಾರ ಷಷ್ಠಿ ಹಿನ್ನೆಲೆ ಸುಬ್ರಮಣ್ಯ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಬೆಳಗ್ಗೆಯಿಂದಲೇ ಸಾವಿರಾರು ಭಕ್ತರು ಆಗಮಿಸಿ ಸ್ವಾಮಿಯ ದರ್ಶನ ಪಡೆದರು. ವಿಶೇಷವಾಗಿ ನಾಗರ ಕಲ್ಲುಗಳಿಗೆ ಹಾಲೆರೆದು ತಮ್ಮಇಷ್ಟಾರ್ಥ ಸಿದ್ಧಿಗಾಗಿ ದೇವರನ್ನು ಪ್ರಾರ್ಥಿಸಿದರು.