ಮಡಿಕೇರಿ: ಅಪಘಾತ ತಪ್ಪಿಸಲು ಹೋಗಿ ಜನರಲ್ ತಿಮ್ಮಯ್ಯ ಪ್ರತಿಮೆಗೆ KSRTC ಬಸ್ ಡಿಕ್ಕಿ - etv bharat kannada
Published : Aug 21, 2023, 6:12 PM IST
ಕೊಡಗು: ಇಲ್ಲಿನ ಜನರಲ್ ತಿಮ್ಮಯ್ಯ ವೃತ್ತಕ್ಕೆ ಕೆಎಸ್ಆರ್ಟಿಸಿ ಬಸ್ ಡಿಕ್ಕಿ ಹೊಡೆದ ಘಟನೆ ಇಂದು ಬೆಳಗ್ಗೆ ನಡೆದಿದೆ. ಪ್ರತಿಮೆ ಹಾನಿಗೊಳಗಾಗಿದೆ. ಬಸ್ ಮಡಿಕೇರಿ ಡಿಪೋದಿಂದ ನಿಲ್ದಾಣಕ್ಕೆ ಹೊರಟಿತ್ತು. ಈ ವೇಳೆ ರಸ್ತೆಗೆ ಅಡ್ಡಬಂದ ಪಿಕಪ್ ವಾಹನಕ್ಕೆ ಡಿಕ್ಕಿ ತಪ್ಪಿಸಲು ಹೋಗಿ ಬಸ್ ತಿಮ್ಮಯ್ಯರ ಪ್ರತಿಮೆಗೆ ಗುದ್ದಿದೆ. ಚಾಲಕ ಹಾಗೂ ನಿರ್ವಾಹಕನಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಈ ವೇಳೆ, ಬಸ್ನಲ್ಲಿ ಪ್ರಯಾಣಿಕರು ಇರಲಿಲ್ಲ ಎಂದು ತಿಳಿದುಬಂದಿದೆ.
ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬಸ್ ಬರುತ್ತಿದ್ದಂತೆ ಮತ್ತೊಂದು ಬದಿಯ ರಸ್ತೆಯಿಂದ ಪಿಕಪ್ ವಾಹನ ಬಂದಿದೆ. ಈ ಸಂದರ್ಭದಲ್ಲಿ ಬಸ್ ಚಾಲಕ ಕೂಡಲೇ ಬ್ರೆಕ್ ಹಾಕಿದ್ದು, ನಿಯಂತ್ರಣ ತಪ್ಪಿ ಪ್ರತಿಮೆಗೆ ಗುದ್ದಿದೆ. ರಭಸಕ್ಕೆ ಬಸ್ನಲ್ಲಿದ್ದ ನಿರ್ವಾಹಕ ಹೊರ ಬಿದ್ದಿರುವುದು ವಿಡಿಯೋದಲ್ಲಿದೆ.
ಅಪಘಾತದ ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಮಡಿಕೇರಿ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಲದೇ ಅಪಘಾತದಲ್ಲಿ ಗಾಯಗೊಂಡ ಚಾಲಕ, ನಿರ್ವಾಹಕನಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ಇದನ್ನೂ ಓದಿ:Watch: ನಿಂತಿದ್ದ ರಿಕ್ಷಾಗೆ ಡಿಕ್ಕಿ ಹೊಡೆದ ಸಾರಿಗೆ ಬಸ್.. ಓರ್ವ ಸಾವು, ಇನ್ನಿಬ್ಬರ ಸ್ಥಿತಿ ಗಂಭೀರ: ವಿಡಿಯೋ