ಕೃಷ್ಣಾ ನದಿಗೆ 2 ಲಕ್ಷ ಕ್ಯೂಸೆಕ್‌ಗೂ ಹೆಚ್ಚು ನೀರು: ಬೆಳಗಾವಿಯಲ್ಲಿ ಪ್ರವಾಹ ಭೀತಿ - ರಾಜಾಪೂರ್ ಬ್ಯಾರೇಜ್
ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ನಿರಂತರ ಮಳೆಗೆ ಬೆಳಗಾವಿಯ ಚಿಕ್ಕೋಡಿ ಉಪವಿಭಾಗದಲ್ಲಿ ಬರುವ ರಾಯಭಾಗ, ನಿಪ್ಪಾಣಿ, ಅಥಣಿ, ಕಾಗವಾಡ, ಚಿಕ್ಕೋಡಿ ತಾಲೂಕಿನಲ್ಲಿ ಮತ್ತೆ ಪ್ರವಾಹ ಭೀತಿ ಎದುರಾಗಿದೆ. ಕೃಷ್ಣಾ ನದಿಗೆ 2,06,532 ಕ್ಯೂಸೆಕ್‌ಗೂ ಹೆಚ್ಚು ನೀರು ಹರಿದುಬರುತ್ತಿದೆ. ಮಹಾರಾಷ್ಟ್ರದ ಕೊಯ್ನಾ ಡ್ಯಾಂ ನಿತ್ಯ 49,524 ಕ್ಯೂಸೆಕ್ ಒಳಹರಿವಿನೊಂದಿಗೆ ಶೇ.83.23ರಷ್ಟು ಭರ್ತಿಯಾಗಿದೆ. 105 ಟಿಎಂಸಿ ಸಂಗ್ರಹದ ಸಾಮರ್ಥ್ಯ ಹೊಂದಿರುವ ಈ ಜಲಾಶಯದಲ್ಲಿ ಈಗಾಗಲೇ 87.60ಟಿಎಂಸಿ ನೀರು ಸಂಗ್ರಹವಿದೆ. ಜಲಾಶಯದ 6 ಗೇಟ್‌ಗಳ ಮೂಲಕ 10,100 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗುತ್ತಿದೆ. ಮಹಾರಾಷ್ಟ್ರದ ರಾಜಾಪೂರ್ ಬ್ಯಾರೇಜ್‌ನಿಂದ ಕೃಷ್ಣಾ ನದಿಗೆ 1,75,400 ಕ್ಯೂಸೆಕ್, ದೂದಗಂಗಾ ನದಿಯಿಂದ 32,032 ಕ್ಯೂಸೆಕ್ ನೀರು ಸೇರಿ ಒಟ್ಟು 2,06,532 ಕ್ಯೂಸೆಕ್ ನೀರು ಕೃಷ್ಣ ನದಿಗೆ ಹರಿದು ಬರುತ್ತಿದೆ. ಪರಿಣಾಮ, ಬೆಳಗಾವಿಯ ನದಿ ತೀರದ ಜಮೀನುಗಳಿಗೆ ನೀರು ನುಗ್ಗಿದೆ. ಜನರಲ್ಲಿ ಮತ್ತೆ ಪ್ರವಾಹಾತಂಕ ಮನೆ ಮಾಡಿದೆ.
Last Updated : Feb 3, 2023, 8:26 PM IST