ಕರ್ನಾಟಕ

karnataka

ತಮಟೆ ಬಾರಿಸಿ ಗಮನ ಸೆಳೆದ ಮಾಜಿ ಸಚಿವ ಕೃಷ್ಣ ಬೈರೇಗೌಡ - ವಿಡಿಯೋ

ETV Bharat / videos

ಮಾಜಿ ಸಚಿವ ಕೃಷ್ಣ ಬೈರೇಗೌಡರು ತಮಟೆ ಬಾರಿಸಿದ್ರೆ ಹೇಗಿರುತ್ತೆ? ವಿಡಿಯೋ ನೋಡಿ - ಈಟಿವಿ ಭಾರತ ಕನ್ನಡ

By

Published : Mar 23, 2023, 11:32 AM IST

ಬ್ಯಾಟರಾಯನಪುರ :ಯುಗಾದಿ ಹಬ್ಬದ ಅಂಗವಾಗಿ ಆಯೋಜಿಸಲಾಗಿದ್ದ ಯುಗಾದಿ ವಸಂತ ಸಂಭ್ರಮ ಕಾರ್ಯಕ್ರಮದಲ್ಲಿ ತಮಟೆ ಬಾರಿಸುವ ಮೂಲಕ ಮಾಜಿ ಸಚಿವ ಕೃಷ್ಣಬೈರೇಗೌಡ ಗಮನ ಸೆಳೆದಿದ್ದಾರೆ. ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ರಾಚೇನಹಳ್ಳಿಯಲ್ಲಿ ಬುಧವಾರ ರಾತ್ರಿ ಯುಗಾದಿ ವಸಂತ ಸಂಭ್ರಮ ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದ ಅಂಗವಾಗಿ ಸಾವಯವ ಸಿರಿಧಾನ್ಯ ಮಳಿಗೆ, ಚಿತ್ರಕಲೆ, ನೃತ್ಯ ಸ್ಪರ್ಧೆ ಮತ್ತು ಸಂಜೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

ಈ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಾಜಿ ಸಚಿವ ಕೃಷ್ಣಬೈರೇಗೌಡರು ತಮಟೆ ವಾದಕರ ಜೊತೆಗೂಡಿ ತಮಟೆ ಬಾರಿಸಿದರು. ತಮಟೆ ಬಾರಿಸುವ ಮೂಲಕ ನೆರೆದಿದ್ದವರನ್ನು ರಂಜಿಸಿದರು. ರಾಜ್ಯಾದ್ಯಂತ ಯುಗಾದಿ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಗಿದೆ. ಮನೆಮಂದಿಯೆಲ್ಲಾ ಒಟ್ಟಾಗಿ ಬೇವು ಬೆಲ್ಲ ಸವಿದು ಯುಗಾದಿ ಹಬ್ಬವನ್ನು ಸಂಭ್ರಮಿಸಿದ್ದಾರೆ. ಯುಗಾದಿ ಹಬ್ಬದಂದು ಜನರು ಹೊಸ ಬಟ್ಟೆ ಧರಿಸಿ ದೇವಾಯಲಕ್ಕೆ ತೆರಳಿ ದೇವರ ದರ್ಶನ ಪಡೆಯುತ್ತಾರೆ. ಹಲವು ಕಡೆಗಳಲ್ಲಿ ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದಿವೆ. 

ಇದನ್ನೂ ಓದಿ :ಮಾದಪ್ಪನ ಬೆಟ್ಟದಲ್ಲಿ ಅದ್ಧೂರಿ ಯುಗಾದಿ ರಥೋತ್ಸವ: ನೋಡಿ ವೈಮಾನಿಕ ದೃಶ್ಯ!

ABOUT THE AUTHOR

...view details