ಕರ್ನಾಟಕ

karnataka

ETV Bharat / videos

ಅಜ್ಜ - ಅಜ್ಜಿಯ ಆಸೆಯಂತೆ ಮದುವೆ ಮನೆಗೆ ಹೆಲಿಕಾಪ್ಟರ್​ನಲ್ಲಿ ಬಂದ ವರ.. ವಿಡಿಯೋ - ರಾಜಸ್ಥಾನದ ಕೋಟಾ ಜಿಲ್ಲೆ

By

Published : Jan 27, 2023, 7:57 PM IST

Updated : Feb 3, 2023, 8:39 PM IST

ಕೋಟಾ (ರಾಜಸ್ಥಾನ): ರಾಜಸ್ಥಾನದ ಕೋಟಾ ಜಿಲ್ಲೆಯಲ್ಲಿ ವರನೊಬ್ಬ ತಾನು ಮದುವೆಯಾಗುವ ವಧುವಿನ ಮನೆಗೆ ಹೆಲಿಕಾಪ್ಟರ್​ನಲ್ಲಿ ಬಂದು ಗಮನ ಸೆಳೆದಿದ್ದಾನೆ. ತನ್ನ ಅಜ್ಜ - ಅಜ್ಜಿಯೊಂದಿಗೆ ಮದುವೆ ಮನೆಗೆ ಬಂದ ವರ ವಿವಾಹ ಸಮಾರಂಭದ ನಂತರ, ಅದೇ ಹೆಲಿಕಾಪ್ಟರ್​​ನಲ್ಲಿ ವಧುವನ್ನು ತನ್ನ ಮನೆಗೆ ಕರೆದುಕೊಂಡು ಹೋಗಿದ್ದಾನೆ.

ಇಲ್ಲಿನ ಧರ್ಮಪುರದ ನಿವಾಸಿ, ಆಸ್ತಿ ಡೀಲರ್ ಆಗಿರುವ ಕೃಷ್ಣ ಮುರಾರಿ ಪ್ರಜಾಪತಿ ಎಂಬುವವರ ಮಗ ಸುನೀಲ್ ಪ್ರಜಾಪತಿ ಮತ್ತು ಇಟಾವಾ ಪಟ್ಟಣದ ಕೈಲಾಶ್ ಪ್ರಜಾಪತಿ ಅವರ ಪುತ್ರಿ ರೇಖಾ ಮದುವೆ ಸಮಾರಂಭ ಗುರುವಾರ ನೆರವೇರಿದೆ. ಸುಮಾರು 60 ಕಿ.ಮೀ ದೂರವಿರುವ ವಧು ರೇಖಾ ಮನೆಗೆ ವರ ಸುನೀಲ್ ಪ್ರಜಾಪತಿ ಹೆಲಿಕಾಪ್ಟರ್​​ನಲ್ಲಿ ಬಂದಿದ್ದಾನೆ. ಹೆಲಿಕಾಪ್ಟರ್​​ನಲ್ಲಿ ಸುನೀಲ್ ಜೊತೆಗೆ ಅಜ್ಜ ರಾಮ ಗೋಪಾಲ್, ಅಜ್ಜಿ ರಾಮಭರೋಸಿ ಮತ್ತು 6 ವರ್ಷದ ಸೋದರಳಿಯ ಸಿದ್ಧಾರ್ಥ್ ಇದ್ದರು.

ಇಟಾವಾ ಪಟ್ಟಣದಲ್ಲಿ ಮದುವೆ ನಂತರ ಇದೇ ಹೆಲಿಕಾಪ್ಟರ್​ನಲ್ಲಿ ವಧು ರೇಖಾಳನ್ನೂ ಸುನೀಲ್ ಪ್ರಜಾಪತಿ ಕರೆದುಕೊಂಡು ಹೋಗಿದ್ದಾನೆ. ಈ ಬಗ್ಗೆ ಮಾತನಾಡಿರುವ ವರ ಸುನೀಲ್​, ವಧುವಿನ ಮನೆಗೆ ಹೆಲಿಕಾಪ್ಟರ್​ನಲ್ಲಿ ಹೋಗಬೇಕೆಂದು ಮೊದಲಿನಿಂದಲೂ ನನ್ನ ಇಚ್ಛೆಯಾಗಿತ್ತು. ಅಲ್ಲದೇ, ನನ್ನ ಅಜ್ಜ-ಅಜ್ಜಿಯ ಇಚ್ಛೆ ಕೂಡ ಇದೇ ಆಗಿತ್ತು. ಆದ್ದರಿಂದ ಅಜ್ಜ-ಅಜ್ಜಿಯ ಆಸೆ ಪೂರೈಸಲು ದೆಹಲಿಯ ಕಂಪನಿಯೊಂದರಿಂದ ಬಾಡಿಗೆ ಹೆಲಿಕಾಪ್ಟರ್​​ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ಅಬ್ಬಾ ಬೆಂಗಳೂರು ಟ್ರಾಫಿಕ್ಕು..: ಮೆಟ್ರೋ ಹತ್ತಿ ಕಲ್ಯಾಣ ಮಂಟಪ ಸೇರಿಕೊಂಡ ವಧು!

Last Updated : Feb 3, 2023, 8:39 PM IST

ABOUT THE AUTHOR

...view details