ಕೊಡಗು: ತಾಯಿ ಮಡಿಲು ಸೇರಿದ ಮರಿಯಾನೆ- ವಿಡಿಯೋ - ತಾಯಿಯಿಂದ ಬೇರ್ಪಟ್ಟ ಮರಿ ಆನೆ
Published : Nov 16, 2023, 7:12 AM IST
ಕೊಡಗು: ಕಾಫಿತೋಟದಲ್ಲಿ ಜನ್ಮ ಪಡೆದು ತಾಯಿಯಿಂದ ದೂರಾಗಿ ಬಳಲುತ್ತಿದ್ದ ಕಾಡಾನೆಯ ಮರಿಯೊಂದನ್ನು ಅರಣ್ಯ ಇಲಾಖೆ ಸಿಬ್ಬಂದಿ ಮರಳಿ ತಾಯಿ ಆನೆಯ ಮಡಿಲು ಸೇರಿಸಿದ್ದಾರೆ. ಜಿಲ್ಲೆಯ ಕರಡ ಕೀಮಲೆಕಾಡುವಿನ ಮನೆಯ ಸಮೀಪದ ಮೊಣ್ಣಕುಟ್ಟಂಡ ಮಂಜು ಎಂಬವರ ಮನೆಯ ಸಮೀಪ ಕಾಡಾನೆ ಹೆಣ್ಣು ಮರಿಗೆ ಜನ್ಮ ನೀಡಿತ್ತು. ಬಳಿಕ ತಾಯಿ ಆನೆ ಕಾಡಿನತ್ತ ತೆರಳಿದೆ.
ಇತ್ತ ಮಾರಿಯಾನೆ ತಾಯಿಯಿಂದ ಬೇರ್ಪಟ್ಟು ಹಸಿವಿನಿಂದ ಕಾಫಿತೋಟದಲ್ಲೇ ತನ್ನ ತಾಯಿಯ ಬರುವಿಕೆಗಾಗಿ ಕಾಯುತ್ತಾ ರೋಧಿಸುತ್ತಿತ್ತು. ಈ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ವಿರಾಜಪೇಟೆ ಅರಣ್ಯ ವಲಯಾಧಿಕಾರಿಗಳಾದ ಕಳ್ಳಿರ ದೇವಯ್ಯ ಹಾಗೂ ಸಿಬ್ಬಂದಿ, ಮರಿಗೆ ಮೊದಲು ಪ್ರಾಥಮಿಕ ಚಿಕಿತ್ಸೆ ನೀಡಿದರು.
ಹಸಿವಿನಿಂದ ಬಳಲುತ್ತಿದ್ದ ಮಾರಿಯಾನೆಗೆ ಗ್ಲೂಕೋಸ್ ನೀಡಿ ಸ್ವಲ್ಪ ದೂರ ಜೀಪ್‌ನಲ್ಲಿ ಕರೆದುಕೊಂಡು ಹೋಗಿ ದಟ್ಟ ಅರಣ್ಯದ ನಡುವೆ ಸಾಗಿ, ಅಂತಿಮವಾಗಿ ತಾಯಿಯಾನೆಯೊಂದಿಗೆ ಸೇರಿಸಿದ್ದಾರೆ. ತಾಯಿ ಆನೆ ತನ್ನ ಮರಿಯನ್ನು ಬಿಟ್ಟು ಸುಮಾರು 7 ಕಿ.ಮೀ ದೂರ ಹೋಗಿರುವುದು ಅಪರೂಪ ಎನ್ನುತ್ತಾರೆ ಅರಣ್ಯಾಧಿಕಾರಿಗಳು.
ಇದನ್ನೂ ಓದಿ:ಬೆಟ್ಟದ ದೇವಿರಮ್ಮನ ದರ್ಶನಕ್ಕೆ ಹರಿದು ಬಂದ ಭಕ್ತಸಾಗರ - ಡ್ರೋನ್ ವಿಡಿಯೋ ನೋಡಿ