ಚಿಕ್ಕಮಗಳೂರು: ಕಾಫಿ ಎಸ್ಟೇಟ್ನಲ್ಲಿ ಭಯ ಹುಟ್ಟಿಸಿದ್ದ 12 ಅಡಿ ಉದ್ದದ ಕಾಳಿಂಗ ಸರ್ಪ ಸೆರೆ - ವಿಡಿಯೋ - ETV Bharat Karnataka
Published : Oct 18, 2023, 7:05 PM IST
|Updated : Oct 19, 2023, 11:57 AM IST
ಚಿಕ್ಕಮಗಳೂರು : ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್ ಪುರ ತಾಲೂಕಿನ ಮಡಬೂರಿನ ಕಾಫಿ ಎಸ್ಟೇಟ್ನಲ್ಲಿ ಬರೋಬ್ಬರಿ 12 ಅಡಿ ಉದ್ದದ ಬೃಹತ್ ಗಾತ್ರದ ಕಾಳಿಂಗ ಸರ್ಪವನ್ನು ಸೆರೆಹಿಡಿಯಲಾಗಿದೆ.
ಕಳೆದ ಆರು ತಿಂಗಳಿಂದ ಕಾಫಿ ಎಸ್ಟೇಟ್ನಲ್ಲೇ ವಾಸ ಮಾಡುತ್ತಿದ್ದ ಈ ಕಾಳಿಂಗ ಸರ್ಪ ಈಗ ಹೋಗಬಹುದು. ನಾಳೆ ಹೋಗಬಹುದು ಎಂದು ತೋಟದ ಕಾರ್ಮಿಕರು ಸರ್ಪವನ್ನು ನೋಡಿಯೂ ನೋಡದ ರೀತಿ ತಮ್ಮ ಕೆಲಸ ಮಾಡಿಕೊಂಡು ಇದ್ದರು. ಪದೇ ಪದೆ ತೋಟದ ಕಾರ್ಮಿಕರಿಗೆ ಕಾಣಿಸಿ ಕೊಂಡು ಕಾಳಿಂಗ ಸರ್ಪ ಭಯ ಹುಟ್ಟಿಸಿತ್ತು.
ಇದರಿಂದ ಬೇಸತ್ತ ಕಾರ್ಮಿಕರು ಕೊನೆಗೆ ಉರಗ ತಜ್ಞನಿಗೆ ಮಾಹಿತಿ ನೀಡಿದ್ದಾರೆ. ಕೂಡಲೆ ಸ್ಥಳಕ್ಕೆ ಆಗಮಿಸಿದ ಉರಗ ತಜ್ಞ ಹರೇಂದ್ರ ಅವರು ಕಾಫಿ ತೋಟದಲ್ಲಿ ಸಂಚಾರ ಮಾಡುತ್ತಿದ್ದ ಕಾಳಿಂಗ ನನ್ನು ಕ್ಷಣ ಮಾತ್ರದಲ್ಲಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಸೆರೆಹಿಡಿದ ಕಾಳಿಂಗ ಸರ್ಪವನ್ನು ನೋಡಿ ಎಸ್ಟೇಟ್ ನಲ್ಲಿ ಕೆಲಸ ಮಾಡುವ ಕಾರ್ಮಿಕರು ನಿಟ್ಟುಸಿರು ಬಿಟ್ಟಿದ್ದು, ಎನ್.ಆರ್ ಪುರದ ಅರಣ್ಯಕ್ಕೆ ಸರ್ಪವನ್ನು ಸುರಕ್ಷಿತವಾಗಿ ಉರಗ ತಜ್ಞ ಬಿಟ್ಟಿದ್ದಾರೆ.
ಇದನ್ನೂ ಓದಿ :ಬಂಟ್ವಾಳ: ಭೀತಿ ಹುಟ್ಟಿಸಿದ 12 ಅಡಿ ಉದ್ದದ ಕಾಳಿಂಗ ಸರ್ಪ ಸೆರೆ