ಗ್ರಾಮಸ್ಥರ ಕಾಡಿದ ಕಾಳಿಂಗನ ಸೆರೆ ಹಿಡಿದು ಕಾಡಿಗೆ ಬಿಟ್ಟ ಸ್ನೇಕ್ ರಿಜ್ವಾನ್ - snake Rizwan of chikkamagaluru
ಚಿಕ್ಕಮಗಳೂರು: ಜಿಲ್ಲೆಯ ಕಳಸ ತಾಲೂಕಿನ ಬಾಳೆಹೊಳೆಯ ಹೆರಟೆ ಗ್ರಾಮದಲ್ಲಿ ಪದೇ ಪದೇ ಕಾಣಿಸಿಕೊಳ್ಳುತ್ತಿದ್ದ ಕಾಳಿಂಗ ಸರ್ಪವನ್ನು ಸ್ನೇಕ್ ರಿಜ್ವಾನ್ ಸೆರೆ ಹಿಡಿದರು. ಕಳೆದ ನಾಲ್ಕು ದಿನಗಳಿಂದ ಹೆರಟೆ ಸೀತಾರಾಮ ಆಚಾರ್ಯರ ಮನೆಯ ಹತ್ತಿರ ಹಾವು ಕಾಣಿಸಿಕೊಳ್ಳುತ್ತಿತ್ತು. ಸುದ್ದಿ ತಿಳಿದ ಗ್ರಾಮದ ಜನರು ಮನೆಯಿಂದ ಹೊರ ಬರೋದಕ್ಕೂ ಹಿಂದೇಟು ಹಾಕುತ್ತಿದ್ದರು. ಸ್ನೇಕ್ ರಿಜ್ವಾನ್ ಅವರಿಗೆ ಈ ವಿಚಾರ ತಿಳಿಸಲಾಗಿತ್ತು. ಅರಣ್ಯ ಇಲಾಖೆಯ ನಂದನ್ ಮತ್ತು ಓಂ ಪ್ರಕಾಶ್ ಅವರ ಸಮ್ಮುಖದಲ್ಲಿ ಸ್ನೇಕ್ ರಿಜ್ವಾನ್ ಸುಮಾರು ಒಂದು ಗಂಟೆ ಕಾರ್ಯಾಚರಣೆ ನಡೆಸಿ ಸುರಕ್ಷಿತವಾಗಿ ಹಾವು ಸೆರೆ ಹಿಡಿದು ಕಾಡಿಗೆ ಬಿಟ್ಟರು.
Last Updated : Feb 3, 2023, 8:29 PM IST