ಕರ್ನಾಟಕ

karnataka

ನಟ ಕಿಚ್ಚ ಸುದೀಪ್

ETV Bharat / videos

ಎಂ ಆರ್ ಪಾಟೀಲ್ ಗೆಲ್ಲಿಸಿ, ಅಭಿವೃದ್ಧಿಗೆ ಜೈಕಾರ ಹಾಕಿ : ಕಿಚ್ಚ ಸುದೀಪ್ ಕರೆ - ಸಂಶಿ ಪಟ್ಟಣದಲ್ಲಿ ಬೃಹತ್ ರೋಡ್ ಶೋ

By

Published : Apr 27, 2023, 10:42 PM IST

ಹುಬ್ಬಳ್ಳಿ:ಕುಂದಗೋಳ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯನ್ನು ಪ್ರಚಂಡ‌ ಬಹುಮತದಿಂದ‌ ಗೆಲ್ಲಿಸಿ ಕಳುಹಿಸಿ, ಇಲ್ಲಿ ಹದಗೆಟ್ಟಿರುವ ರಸ್ತೆ ಸರಿಪಡಿಸುತ್ತಾರೆ. ಅವರು ಗೆದ್ದ ಮೇಲೂ ಅವರಿಂದ ಕೆಲಸ ಆಗದಿದ್ದರೆ ಆ ಕೆಲಸವನ್ನು ಮಾಡಿಸಿಕೊಡಲು ನನ್ನನ್ನು ಕೇಳಿ ಎಂದು ನಟ ಕಿಚ್ಚ ಸುದೀಪ್ ಹೇಳಿದರು.

ಕುಂದಗೋಳ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂ‌ ಆರ್ ಪಾಟೀಲ್ ಪರ ಸಂಶಿ ಪಟ್ಟಣದಲ್ಲಿ ಬೃಹತ್ ರೋಡ್ ಶೋ ನಡೆಸಿ ಮಾತನಾಡಿದ ಅವರು, ನಿಮ್ಮೂರಲ್ಲಿನ‌ ಪರಿಸ್ಥಿತಿ ಹದಗೆಟ್ಟು ಹೋಗಿದೆ. ಆದರೂ ನೀವು ಸುಮ್ಮನಿದ್ದೀರಿ ಎಂದುಕೊಂಡಿಲ್ಲ. ಏಕೆಂದರೆ ನೀವೆಲ್ಲಾ ಬಿಜೆಪಿ ಅಭ್ಯರ್ಥಿ ಎಂ ಆರ್ ಪಾಟೀಲ್ ಅವರನ್ನು ಖಂಡಿತ ಗೆಲ್ಲಿಸುತ್ತೀರಿ ಎಂಬ ವಿಶ್ವಾಸ ನನಗೀಗ ಮೂಡಿದೆ. ರಾಜ್ಯದಲ್ಲಿ ‌ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಬೇಕು.‌ ಎಂ ಆರ್ ಪಾಟೀಲ ಕುಂದಗೋಳ ಶಾಸಕರಾಗಬೇಕು.‌ ಅದಕ್ಕಾಗಿ ನೀವೆಲ್ಲರೂ ವೋಟ್ ಹಾಕಬೇಕು ಮತ್ತು ಹಾಕಿಸಬೇಕು ಎಂದು ತಮ್ಮದೇ ಸಿನಿಮಾ‌ ದಾಟಿಯಲ್ಲಿ ಕರೆ ನೀಡಿದರು.

ಕುಂದಗೋಳ ಪಟ್ಟಣದಲ್ಲಿ ಹೆಲಿಕಾಪ್ಟರ್​ನಲ್ಲಿ ಬಂದಿಳಿದು ರಸ್ತೆ ಮೂಲಕ ಸಂಶಿ ತಲುಪಿ ಬಸ್ ನಿಲ್ದಾಣದ ಮೂಲಕ ಮೆರವಣಿಗೆಯಲ್ಲಿ ಸಾಗಿ ನಂತರ ಬಹಿರಂಗ ಸಭೆಯಲ್ಲಿ ಪಾಲ್ಗೊಂಡರು. ಅಭಿಮಾನಿಗಳ ಉತ್ಸಾಸ ಕಂಡು ಸಂತಸಗೊಂಡ ಸುದೀಪ್, ಆಕಾಶದತ್ತ ಕೇಸರಿ‌ ಬಲೂನ್ ಹಾರಿಸಿ ವಿಜಯದ ಸಂಕೇತ ತೋರಿಸಿದರು. ಬಿಜೆಪಿ ಅಭ್ಯರ್ಥಿ ಎಂ ಆರ್ ಪಾಟೀಲ್ ಮಾತನಾಡಿ, ನಾನು‌ ನಿಮ್ಮ ಸೇವಕ. ನಾನು‌ ಯಾವುದಕ್ಕೂ ಆಸೆ ಪಡುವವನಲ್ಲ. ಅಭಿವೃದ್ಧಿ ಮಾಡಿ‌ ಮತ ಕೇಳುತ್ತಿದ್ದೇನೆ ಎಂದರು. ಜಿಲ್ಲಾ ಗ್ರಾಮೀಣ ಅಧ್ಯಕ್ಷ ಬಸವರಾಜ ಕುಂದಗೋಳಮಠ ಸಹಿತ ಅನೇಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಇದನ್ನೂ ಓದಿ:ಹಾವೇರಿಯಲ್ಲಿ ಅಬ್ಬರಿಸಿದ ಹೆಬ್ಬುಲಿ: ಬಿಜೆಪಿ ಪರ ಸುದೀಪ್​ ಮತಬೇಟೆ

ABOUT THE AUTHOR

...view details