ಖೇಲೋ ಇಂಡಿಯಾ ವಿಂಟರ್ ಗೇಮ್ಸ್ ಮುಕ್ತಾಯ.. ಅದ್ದೂರಿ ತೆರೆ
ಗುಲ್ಮಾರ್ಗ್ (ಜಮ್ಮು ಮತ್ತು ಕಾಶ್ಮೀರ ) :ಖೇಲೋ ಇಂಡಿಯಾ ವಿಂಟರ್ ಗೇಮ್ಸ್ ಮಂಗಳವಾರ ಮುಕ್ತಾಯಗೊಂಡಿದೆ. ಈ ಕ್ರೀಡಾಕೂಟದಲ್ಲಿ 1500 ಕ್ಕೂ ಹೆಚ್ಚು ಕ್ರೀಡಾಪಟುಗಳು ವಿವಿಧ ಆಟಗಳಲ್ಲಿ ಭಾಗವಹಿಸಿದರೆ, ಜಮ್ಮು ಮತ್ತು ಕಾಶ್ಮೀರವು ಈ ಬಾರಿಯೂ ಹೆಚ್ಚಿನ ಪದಕಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿವೆ.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕೇಂದ್ರ ಯುವಜನ ವ್ಯವಹಾರ ಮತ್ತು ಕ್ರೀಡಾ ರಾಜ್ಯ ಖಾತೆ ಸಚಿವ ನಿಸಿತ್ ಪ್ರಮಾಣಿಕ್ ವಹಿಸಿದ್ದರು. ಅನೇಕ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಆಟಗಾರರು ಸಂತಸದಿಂದ ಕುಣಿದು ಕುಪ್ಪಳಿಸಿದ ಈ ಸಂದರ್ಭದಲ್ಲಿ ವೇದಿಕೆಯಲ್ಲಿದ್ದ ಅದ್ಬುತ ಸಂಗೀತವೂ ರಸಿಕರ ಮನಗೆದ್ದಿತು. ಈ ವೇಳೆ ಪ್ರಮಾಣಿಕ್ ಮಾತನಾಡಿ, ಇದು ಚಳಿಗಾಲದ ಕ್ರೀಡೆಗಳಲ್ಲದೇ ಎಲ್ಲರೂ ಕೊಡುಗೆ ನೀಡಿದ ಹಬ್ಬವೂ ಹೌದು. ಸಚಿವರ ಈ ಬದ್ಧತೆಯು ನರೇಂದ್ರ ಮೋದಿಯವರ ಕನಸನ್ನು ನನಸಾಗಿಸಲು ತೆಗೆದುಕೊಂಡ ಕ್ರಮಗಳಾಗಿವೆ. ನಾನು ಎಲ್ಲರಿಗೂ ಧನ್ಯವಾದ ಹೇಳಲು ಬಯಸುತ್ತೇನೆ. ಈ ಬಾರಿ ಎಲ್ಲ ದಾಖಲೆಗಳನ್ನು ಮುರಿಯಲಾಗಿದೆ ಎಂದರು.
ಜಮ್ಮು ಮತ್ತು ಕಾಶ್ಮೀರ ಹೊಸ ರೂಪ ಪಡೆದುಕೊಂಡಿದೆ. ಇಲ್ಲಿನ ಯುವಕರು ಎಲ್ಲರನ್ನೂ ಎದುರಿಸಲು ಸಿದ್ಧರಾಗಿದ್ದಾರೆ. ಇಲ್ಲಿ ಎಲ್ಲರೂ ಎಲ್ಲರೊಂದಿಗಿದ್ದಾರೆ, ಅಭಿವೃದ್ಧಿಯನ್ನು ವೇಗದಿಂದ ಮುನ್ನಡೆಸುತ್ತಿದ್ದಾರೆ. ಇಲ್ಲಿ ಆಟದ ತಿರುಳು ಉತ್ತಮವಾಗಿದೆ. ಆರೀಫ್ ಖಾನ್ ದೇಶಕ್ಕೆ ಕೀರ್ತಿ ತಂದಿದ್ದಾರೆ. ಮುಂದಿನ ವರ್ಷ ಇಲ್ಲಿ ದೊಡ್ಡ ಕಾರ್ಯಕ್ರಮ ನಡೆಯಲಿದೆ ಎಂದರು.