ರಾಜೀವ್ ಗಾಂಧಿ 32ನೇ ಪುಣ್ಯತಿಥಿ: ಖರ್ಗೆ, ಸೋನಿಯಾ ಸೇರಿದಂತೆ ಗಣ್ಯರಿಂದ ಶ್ರದ್ಧಾಂಜಲಿ - ಸೋನಿಯಾ ಗಾಂಧಿ
ನವದೆಹಲಿ:ಇಂದು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ 32ನೇ ಪುಣ್ಯತಿಥಿ. ಇದರಅಂಗವಾಗಿ ದೆಹಲಿಯ ವೀರ ಭೂಮಿಯಲ್ಲಿಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಇತರ ಗಣ್ಯರು ಶ್ರದ್ಧಾಂಜಲಿ ಸಲ್ಲಿಸಿದರು.
"ರಾಜೀವ್ ಗಾಂಧಿ ಭಾರತ ಮಾತೆಯ ಶ್ರೇಷ್ಠ ಸುಪುತ್ರ. ಮತದಾನದ ವಯಸ್ಸನ್ನು ಕಡಿಮೆಗೊಳಿಸುವುದು, ಪಂಚಾಯತ್ ರಾಜ್, ಟೆಲಿಕಾಂ ಮತ್ತು ಐಟಿ ಕ್ಷೇತ್ರವನ್ನು ಬಲಪಡಿಸುವುದು ಮತ್ತು ನಿರಂತರ ಶಾಂತಿ ಒಪ್ಪಂದಗಳಂತಹ ಬಹು ಮಧ್ಯಸ್ಥಿಕೆಗಳ ಮೂಲಕ 21ನೇ ಶತಮಾನದಲ್ಲಿ ಭಾರತವನ್ನು ಪರಿವರ್ತಿಸಿದರು. ಅವರ ಹುತಾತ್ಮ ದಿನದಂದು ನಮ್ಮ ನಮನಗಳು" ಎಂದು ಮಲ್ಲಿಕಾರ್ಜುನ ಖರ್ಗೆ ಟ್ವೀಟ್ ಮಾಡಿ ಕೊಂಡಾಡಿದ್ದಾರೆ.
ಇಂದಿರಾ ಗಾಂಧಿ ಹತ್ಯೆಯ ಬಳಿಕ ದೇಶದ ಪ್ರಧಾನಿಯಾಗಿ ರಾಜೀವ್ ಗಾಂಧಿ ಅಧಿಕಾರ ವಹಿಸಿಕೊಂಡಿದ್ದರು. 1984 ರಿಂದ 1989 ರವರೆಗೆ ಅವರು ಪ್ರಧಾನಿ ಹುದ್ದೆಯಲ್ಲಿದ್ದು, 'ಅತ್ಯಂತ ಕಿರಿಯ ಪ್ರಧಾನಿ' ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದರು. ತಮಿಳುನಾಡಿನ ಪೆರಂಬದೂರಿನಲ್ಲಿ ಚುನಾವಣಾ ರ‍್ಯಾಲಿಯಲ್ಲಿ ಲಿಬರೇಶನ್ ಟೈಗರ್ಸ್ ಆಫ್ ತಮಿಳು ಈಳಂ (LTTE) ಆತ್ಮಹತ್ಯಾ ಬಾಂಬರ್‌ನಿಂದ 1991ರ ಮೇ 21 ರಂದು ರಾಜೀವ್ ಗಾಂಧಿ ಅವರನ್ನು ಹತ್ಯೆ ಮಾಡಲಾಗಿತ್ತು.
ಇದನ್ನೂ ಓದಿ:'ಹಾರಾಡುವ ಶವಪೆಟ್ಟಿಗೆ'! ತನಿಖೆ ಮುಗಿಯುವವರೆಗೆ ಮಿಗ್ 21 ಯುದ್ಧ ವಿಮಾನಗಳ ಹಾರಾಟವಿಲ್ಲ