ಕರ್ನಾಟಕ

karnataka

ETV Bharat / videos

ಪಂಜಾಬ್ ನ್ಯಾಯಾಧೀಶರ ನಿವಾಸದೆದುರಿನ ಗೋಡೆ ಮೇಲೆ 'ಖಲಿಸ್ತಾನ್ ಜಿಂದಾಬಾದ್' ಬರಹ - Khalistan Zindabad writings

By

Published : Jun 11, 2022, 12:38 PM IST

Updated : Feb 3, 2023, 8:23 PM IST

ಫರೀದ್ ಕೋಟ್ (ಪಂಜಾಬ್): ಫರೀದ್‌ಕೋಟ್ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರ ಅಧಿಕೃತ ನಿವಾಸದ ಹೊರಭಾಗದ ಗೋಡೆಯ ಮೇಲೆ ಖಲಿಸ್ತಾನ್​ ಜಿಂದಾಬಾದ್ ಎಂಬ ಘೋಷಣೆ ಬರೆಯಲಾಗಿದೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಗೋಡೆ ಮೇಲೆ ಬರೆದಿದ್ದ ಘೋಷಣೆಗೆ ಬಣ್ಣ ಬಳಿದಿದ್ದಾರೆ. ಆದರೆ, ಈ ಪ್ರಕರಣದ ನಂತರ ಜನರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಒಂದು ತಿಂಗಳಲ್ಲಿ ಫರೀದ್‌ಕೋಟ್‌ನಲ್ಲಿ ನಡೆದ ಕೃತ್ಯದಲ್ಲಿ ಇದು ಎರಡನೇ ಘಟನೆ ಎಂದು ತಿಳಿದು ಬಂದಿದೆ. ಇಡೀ ನಗರದಲ್ಲಿ ಪೊಲೀಸರು ಬೀಡು ಬಿಟ್ಟಿದ್ದು, ನ್ಯಾಯಾಧೀಶರ ನಿವಾಸದ ಬಳಿ ಇರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ. ಖಾಲಿಸ್ತಾನ್ ಜಿಂದಾಬಾದ್ ಫೋರ್ಸ್ ಎಂಬುದು ಉಗ್ರ ಸಂಘಟನೆಯಾಗಿದ್ದು, ಜನರಲ್ಲಿ ಭಯ ಹುಟ್ಟಿಸುವ ಪ್ರಯತ್ನ ಮಾಡುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated : Feb 3, 2023, 8:23 PM IST

ABOUT THE AUTHOR

...view details