ಕರ್ನಾಟಕ

karnataka

ಕೇರಳದ ವಿಲೇಜ್ ಫೀಲ್ಡ್ ಅಸಿಸ್ಟೆಂಟ್

ETV Bharat / videos

ಲಂಚ ಸ್ವೀಕರಿಸುವಾಗ ಸಿಕ್ಕಿ ಬಿದ್ದ ವಿಲೇಜ್ ಫೀಲ್ಡ್ ಅಸಿಸ್ಟೆಂಟ್​​: ಬಾಡಿಗೆ ಮನೆಯಲ್ಲಿ ಪತ್ತೆಯಾಯ್ತು 17 ಕೆಜಿ ಚಿನ್ನಾಭರಣ, ಕೋಟಿ ಹಣ! - ಈಟಿವಿ ಭಾರತ್​ ಕನ್ನಡ ನ್ಯೂಸ್

By

Published : May 24, 2023, 4:40 PM IST

ಪಾಲಕ್ಕಾಡ್ (ಕೇರಳ) : ಲಂಚ ಪಡೆಯುವಾಗ ರೆಡ್​​ಹ್ಯಾಂಡ್​​ ಆಗಿ ಮನ್ನಾರ್ಕ್ಕಾಡ್ ಗ್ರಾಮದ ವಿಲೇಜ್ ಫೀಲ್ಡ್ ಅಸಿಸ್ಟೆಂಟ್​ ಸಿಕ್ಕಿ ಬಿದ್ದಿದ್ದಾರೆ. ವಿಲೇಜ್ ಫೀಲ್ಡ್ ಅಸಿಸ್ಟೆಂಟ್​ನನ್ನು ವಿ.ಸುರೇಶ್ ಕುಮಾರ್ ಎಂದು ವಿಜಿಲೆನ್ಸ್ ಅಧಿಕಾರಿಗಳು ಗುರುತಿಸಿದ್ದಾರೆ. ಖಚಿತ ಸುಳಿವಿನ ಮೇಲೆ  ಆತ ವಾಸವಿದ್ದ ಬಾಡಿಗೆ ಮನೆ ಮೇಲೆಯೂ ವಿಜಿಲೆನ್ಸ್ ಅಧಿಕಾರಿಗಳು ದಾಳಿ ನಡೆಸಿ 35 ಲಕ್ಷ ರೂ. ನಗದು, 70 ಲಕ್ಷ ರೂ. ಬ್ಯಾಂಕ್ ಠೇವಣಿ ದಾಖಲೆಗಳು ಹಾಗೂ 17 ಕೆಜಿ ಚಿನ್ನಾಭರಣಗಳನ್ನು ಇದೇ ವೇಳೆ ವಶಕ್ಕೆ ಪಡೆದುಕೊಂಡಿದ್ದಾರೆ. 

ಪಾಲಕ್ಕಯಂ ಗ್ರಾಮದ ವ್ಯಕ್ತಿಯೊಬ್ಬರು ತಮ್ಮ ಜಮೀನಿನ ಪ್ರಮಾಣಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಈ ವೇಳೆ ಸ್ಥಳ ಪ್ರಮಾಣಪತ್ರ ನೀಡಲು ಬಂಧಿತ ಆರೋಪಿ ವಿ.ಸುರೇಶ್ ಕುಮಾರ್ 2500 ರೂ.ಗಳಿಗಾಗಿ ಬೇಡಿಕೆ ಇಟ್ಟಿದ್ದರು. ನಂತರ ಆ ವ್ಯಕ್ತಿ ಅಧಿಕಾರಿಗಳಿಗೆ ಮಾಹಿತಿ ನೀಡಿ ಹಣದೊಂದಿಗೆ ಸುರೇಶ್ ಕುಮಾರ್ ಬಳಿ ಹೋಗಿದ್ದಾರೆ. ಇದೇ ಸಮಯಕ್ಕೆ ಸರಿಯಾಗಿ ಲಂಚ ಪಡೆಯುವಾಗ ಆರೋಪಿಯನ್ನು ವಿಜಿಲೆನ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.   

ಇದನ್ನೂ ಓದಿ :ಕೇರಳದಲ್ಲಿ ಸಂಪೂರ್ಣ ಇ-ಆಡಳಿತ ಜಾರಿ: ಸರ್ಕಾರ ಸೇವೆಗಳ ಡಿಜಿಟಲೀಕರಣ!

ABOUT THE AUTHOR

...view details