ಕರ್ನಾಟಕ

karnataka

ದೇವಸ್ಥಾನದ ಮುಂದೆ ತಮಿಳು ಹಾಡಿಗೆ ಕುಣಿದ ಕೇರಳ ಪೊಲೀಸ್

ETV Bharat / videos

ದೇವಸ್ಥಾನದ ಮುಂದೆ ತಮಿಳು ಹಾಡಿಗೆ ಕುಣಿದ ಕೇರಳ ಪೊಲೀಸ್​ ಸಸ್ಪೆಂಡ್‌- ವಿಡಿಯೋ - ದೇವಸ್ಥಾನದ ಮುಂದೆ ತಮಿಳು ಹಾಡಿಗೆ ಕುಣಿದ ಕೇರಳ ಪೊಲೀಸ್

By

Published : Apr 6, 2023, 6:47 PM IST

ಇಡುಕ್ಕಿ (ಕೇರಳ):ದೇವಸ್ಥಾನದ ಉತ್ಸವದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ನಿಯೋಜಿಸಿದ್ದ ಪೊಲೀಸ್​ ಅಧಿಕಾರಿಯೇ ನೃತ್ಯ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಕೇರಳದ ಇಡುಕ್ಕಿ ಜಿಲ್ಲೆಯ ಪೂಪ್ಪಾರ ಮಾರಿಯಮ್ಮ ದೇಗುಲದಲ್ಲಿ ನಿನ್ನೆ(ಗುರುವಾರ) ಜರುಗಿದ ಉತ್ಸವದಲ್ಲಿ ಘಟನೆ ನಡೆಯಿತು.

ಶಾಂತನಪರ ಪೊಲೀಸ್​ ಠಾಣೆಯ ಸಬ್​ ಇನ್​ಸ್ಪೆಕ್ಟರ್​ ಕೆ.ಪಿ.ಶಾಜಿ ಹಾಗೂ ತಂಡ ಉತ್ಸವದ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಕಾನೂನು ಸುವ್ಯವಸ್ಥೆ ಕಾಪಾಡಲು ದೇವಸ್ಥಾನಕ್ಕೆ ಆಗಮಿಸಿದ್ದರು. ಅಷ್ಟರಲ್ಲಿ 'ಮರಿಯಮ್ಮ ಕಾಳಿಯಮ್ಮ' ಎಂಬ ತಮಿಳು ಹಾಡು ಕೇಳಿದ ಎಸ್​ಐ ಡ್ಯಾನ್ಸ್​ ಮಾಡಿದ್ದಾರೆ. ಪೊಲೀಸ್​ ಅಧಿಕಾರಿ ನೃತ್ಯ ಮಾಡುತ್ತಿದ್ದುದನ್ನು ಅಲ್ಲಿ ನೆರೆದಿದ್ದವರು ಮೊಬೈಲ್​ ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾರೆ. ನೃತ್ಯ ನಿಲ್ಲಿಸದೇ ಇರುವುದನ್ನು ಕಂಡ ಸ್ಥಳೀಯರು ಅಧಿಕಾರಿಯನ್ನು ತರಾಟೆಗೂ ತೆಗೆದುಕೊಂಡಿದ್ದರು.

ಮಹಿಳೆಯರು, ಮಕ್ಕಳು ಸೇರಿದಂತೆ ಸುಮಾರು ನೂರಾರು ಮಂದಿ ಉತ್ಸವದಲ್ಲಿ ಭಾಗವಹಿಸಲು ಆಗಮಿಸಿದ್ದರು. ಕೇರಳ-ತಮಿಳುನಾಡು ಗಡಿ ಜಿಲ್ಲೆ ಇಡುಕ್ಕಿಯ ಹೈ-ರೇಂಜ್ ಪ್ರದೇಶಗಳಲ್ಲಿ, ತಮಿಳು ಸಂಸ್ಕೃತಿಯ ದೇವಾಲಯಗಳಲ್ಲಿ ಹಬ್ಬದ ಸಂದರ್ಭದಲ್ಲಿ ಸ್ಥಳೀಯ ಜನರು 'ಮರಿಯಮ್ಮನ್' ಹಾಡುಗಳಿಗೆ ನೃತ್ಯ ಮಾಡುತ್ತಾರೆ. ಆದರೆ ಸಬ್​ ಇನ್​ಸ್ಪೆಕ್ಟರ್ ಸ್ಥಳದಲ್ಲಿ ಡ್ಯಾನ್ಸ್ ಮಾಡಿರುವುದು ಸ್ಥಳೀಯರಲ್ಲಿ ಅಸಮಾಧಾನ ಉಂಟುಮಾಡಿದೆ. ದೃಶ್ಯಾವಳಿಗಳಲ್ಲಿ, ಸ್ಥಳೀಯರು ಮಧ್ಯಪ್ರವೇಶಿಸಿ ಎಸ್‌ಐ ನೃತ್ಯ ಮಾಡದಂತೆ ತಡೆಯುವುದನ್ನು ಕಾಣಬಹುದು. ಘಟನೆಗೆ ಸಂಬಂಧಿಸಿದಂತೆ ಕೆ.ಪಿ.ಶಾಜಿ ಅವರನ್ನು ಅಮಾನತುಗೊಳಿಸಲಾಗಿದೆ. ಕರ್ತವ್ಯದ ವೇಳೆ ಸಾರ್ವಜನಿಕವಾಗಿ ನೃತ್ಯ ಮಾಡಿದ್ದಕ್ಕಾಗಿ ಕಠಿಣ ಕ್ರಮ ತೆಗೆದುಕೊಳ್ಳಲಾಗಿದೆ. 

ಇದನ್ನೂ ನೋಡಿ:ದಕ್ಷಿಣ ಕಾಶಿ ನಂಜನಗೂಡಿನಲ್ಲಿ ಸಂಭ್ರಮದ ತೆಪ್ಪೋತ್ಸವ.. ಬಾಣ ಬಿರುಸುಗಳ ಚಿತ್ತಾರದ ಮೆರುಗು

ABOUT THE AUTHOR

...view details