ಹಿಮಜಲಪಾತದ ನಡುವೆ ರಸ್ತೆ ಸಿದ್ಧಪಡಿಸಿದ ಸೈನಿಕರು.. ಕೇದಾರನಾಥನ ದರ್ಶನ ಪಡೆದ ಸಾವಿರಾರು ಭಕ್ತರು! - ಭೈರವ ಮತ್ತು ಕುಬೇರ ಎಂಬ ಎರಡು ಹಿಮ ಜಲಪಾತ
ರುದ್ರಪ್ರಯಾಗ (ಉತ್ತರಾಖಂಡ): ಕೇದಾರನಾಥ ನಡಿಗೆ ಮಾರ್ಗದಲ್ಲಿರುವ ಭೈರವ ಮತ್ತು ಕುಬೇರ ಎಂಬ ಎರಡು ಹಿಮ ಜಲಪಾತಗಳಿದ್ದು, ರಸ್ತೆ ಮೇಲೆ ಬಿದ್ದ ಹಿಮವನ್ನು ತೆರವುಗೊಳಿಸಲಾಗಿದೆ. ಡಿಡಿಎಂಎ, ಎಸ್‌ಡಿಆರ್‌ಎಫ್, ಡಿಡಿಆರ್‌ಎಫ್, ಎನ್‌ಡಿಆರ್‌ಎಫ್, ವೈಎಂಎಫ್ ಮತ್ತು ಪೊಲೀಸ್ ಸಿಬ್ಬಂದಿ ಕಠಿಣ ಪರಿಶ್ರಮದ ನಂತರ ಕೇದಾರನಾಥನ ದರ್ಶನ ಪಡೆಯುವ ಭಕ್ತರಿಗೆ ದಾರಿ ಸಿದ್ಧಪಡಿಸಿದ್ದಾರೆ. ವಿಶೇಷವಾಗಿ ಇಲ್ಲಿ ನಿಯೋಜನೆಗೊಂಡಿರುವ ಯೋಧರಿಂದ ಯಾತ್ರಾರ್ಥಿಗಳು ಸುರಕ್ಷಿತವಾಗಿ ಪ್ರಯಾಣಿಸುತ್ತಿದ್ದಾರೆ. ಇಂದು, ಐದು ಸಾವಿರ ಯಾತ್ರಾರ್ಥಿಗಳು ಸೋನಪ್ರಯಾಗದಿಂದ ಕೇದಾರನಾಥ ಧಾಮಕ್ಕೆ ತೆರಳಿದರು, ಆದರೆ ಕಾಲ್ನಡಿಗೆಯಲ್ಲಿ ಕುದುರೆಗಳು ಮತ್ತು ಹೇಸರಗತ್ತೆಗಳ ಪ್ರಯಾಣ ಕೂಡಾ ಬಂದ್ ಆಗಿದೆ.
ಕೇದಾರನಾಥ ಧಾಮ ಸೇರಿದಂತೆ 18 ಕಿಮೀ ಪಾದಚಾರಿ ಮಾರ್ಗದಲ್ಲಿ ಹಿಮಪಾತದಿಂದಾಗಿ ಹಲವು ಸಮಸ್ಯೆಗಳು ಎದುರಾಗಿವೆ. ಇದರಿಂದಾಗಿ ಪ್ರಯಾಣದ ಮೇಲೆ ಕೆಟ್ಟ ಪರಿಣಾಮ ಕಂಡು ಬರುತ್ತಿದೆ. ಆಡಳಿತ ಮಂಡಳಿಯಿಂದ ಬುಧವಾರ ಯಾತ್ರೆಯನ್ನು ಸಂಪೂರ್ಣವಾಗಿ ಬಂದ್ ಮಾಡಿತ್ತು. ಈ ಎರಡೂ ಸ್ಥಳಗಳಲ್ಲಿ ಬೃಹತ್ ಹಿಮನದಿಗಳಿದ್ದು, ಇಲ್ಲಿ ಹಾದುಹೋಗಲು ತುಂಬಾ ಕಷ್ಟವಾಗುತ್ತಿದೆ. ಹೀಗಾಗಿ ಸೈನಿಕರ ಕಠಿಣ ಪರಿಶ್ರಮದಿಂದಾಗಿ ದಾರಿ ಸಿದ್ದಗೊಂಡಿದ್ದು, ಕೇದಾರನಾಥನನ್ನು ನೋಡಲು ಯಾತ್ರಿಗಳು ಪ್ರಯಾಣ ಬೆಳಸಿದ್ದಾರೆ.
ಜಿಲ್ಲಾ ವಿಪತ್ತು ನಿರ್ವಹಣಾ ಅಧಿಕಾರಿ ನಂದನ್ ಸಿಂಗ್ ರಾಜ್ವರ್ ಮಾತನಾಡಿ, ಕೇದಾರನಾಥ ಟ್ರೆಕ್ಕಿಂಗ್ ಮಾರ್ಗದ ಭೈರವ್ ಗದೆರೆಯಲ್ಲಿ ಹಿಮನದಿ ಒಡೆದ ಕಾರಣ, ಮಾರ್ಗವನ್ನು ಸಂಚಾರಕ್ಕೆ ನಿರ್ಬಂಧಿಸಲಾಗಿದೆ. ಹಿಮವನ್ನು ತೆಗೆದುಹಾಕುವ ಮೂಲಕ ಕೇದಾರನಾಥ ಯಾತ್ರೆ ಮಾರ್ಗದಲ್ಲಿ ಸಂಚಾರ ಸುಗಮಗೊಳಿಸಲಾಗಿದೆ. ಕುದುರೆಗಳು ಮತ್ತು ಹೇಸರಗತ್ತೆಗಳ ಪ್ರಯಾಣದ ಮಾರ್ಗವನ್ನು ಇನ್ನೂ ತೆರೆಯಲಾಗಿಲ್ಲ. ಕೂಲಿಕಾರರಿಂದ ಹಿಮ ತೆಗೆಯುವ ಕೆಲಸ ವೇಗವಾಗಿ ನಡೆಯುತ್ತಿದ್ದು, ಕುದುರೆ, ಹೇಸರಗತ್ತೆಗಳ ಓಡಾಟವೂ ಸಾಧ್ಯವಾಗಲಿದೆ. ಭೈರವ್ ಗ್ಲೇಸಿಯರ್ ಮತ್ತು ಕುಬೇರ್ ಗ್ಲೇಸಿಯರ್‌ನಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಎಸ್‌ಡಿಆರ್‌ಎಫ್, ಡಿಡಿಆರ್‌ಎಫ್, ಎನ್‌ಡಿಆರ್‌ಎಫ್, ವೈಎಂಎಫ್ ಮತ್ತು ಪೊಲೀಸ್ ಸಿಬ್ಬಂದಿ ಹಿಮನದಿ ದಾಟಲು ಪ್ರಯಾಣಿಕರಿಗೆ ಸಹಾಯ ಮಾಡುತ್ತಿದ್ದಾರೆ. ಇದರಿಂದ ಯಾವುದೇ ಅಹಿತಕರ ಘಟನೆಗಳು ಸಂಭವಿಸುವುದಿಲ್ಲ ಎಂದು ಅವರು ಹೇಳಿದರು.
ಜಿಲ್ಲಾಧಿಕಾರಿ ಮಯೂರ್ ದೀಕ್ಷಿತ್ ಮಾತನಾಡಿ, ಎಲ್ಲ ಅಧಿಕಾರಿಗಳು, ನೌಕರರು ಮತ್ತು ಕಾರ್ಮಿಕರು ಕಷ್ಟಕರ ಸಂದರ್ಭಗಳಲ್ಲಿ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪ್ರಯಾಣಿಕರ ಸುರಕ್ಷತೆಯ ಜೊತೆಗೆ ತಮ್ಮ ಸುರಕ್ಷತೆಯ ಬಗ್ಗೆಯೂ ವಿಶೇಷ ಕಾಳಜಿ ವಹಿಸುವಂತೆ ಕೋರಿದ್ದಾರೆ. ಎರಡೂ ಗ್ಲೇಸಿಯರ್ ಪಾಯಿಂಟ್‌ಗಳಲ್ಲಿ ಹೆಚ್ಚು ಜನ ಸೇರಲು ಬಿಡಬೇಡಿ ಮತ್ತು ಮಾರ್ಗದಲ್ಲಿರುವ ಪ್ರಯಾಣಿಕರು ಹಿಮನದಿಯನ್ನು ದಾಟುವಂತೆ ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದರು.
ಓದಿ: ರಾಜ್ಯದಲ್ಲಿ ಈವರೆಗೆ 2,602 FIR ದಾಖಲು; ₹331 ಕೋಟಿ ಮೌಲ್ಯದ ವಸ್ತುಗಳು ಜಪ್ತಿ