ಬಂಗಾರ ಬಂಗಾರವೇ.. ಪ್ರತ್ಯೇಕ ಲಿಂಗಾಯತ ಧರ್ಮದ ಬಗ್ಗೆ ಕೇದಾರ ಶ್ರೀ ಹೇಳಿಕೆ - ಕಾವೇರಿ ನದಿ ನೀರು ಬಿಕ್ಕಟ್ಟು
Published : Sep 25, 2023, 6:47 PM IST
ದಾವಣಗೆರೆ:ಯಾವುದು ಗಟ್ಟಿಯಾಗಿ ಸಂಪ್ರದಾಯದ ಮೇಲೆ ನಿಂತಿದೆಯೋ ಅದು ಅಪ್ಪಟ ಬಂಗಾರ. ಇನ್ನುಳಿದದ್ದು ನಕಲಿ ಬಂಗಾರ ಎಂದು ಕೇದಾರ ಗುರುಪೀಠದ ಭೀಮಾಶಂಕರ ಲಿಂಗಸ್ವಾಮೀಜಿ ಪ್ರತ್ಯೇಕ ಲಿಂಗಾಯತ ಧರ್ಮದ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನಗರದ ಹೈಸ್ಕೂಲ್ ಮೈದಾನದಲ್ಲಿ ಪ್ರತಿಷ್ಠಾಪನೆ ಮಾಡಲಾದ ಹಿಂದೂ ಮಹಾ ಗಣಪತಿ ಮಂಟಪಕ್ಕೆ ಭೇಟಿ ನೀಡಿದ ಬಳಿಕ ಮಾತನಾಡಿದ ಅವರು, ಈಗ ಹೆಚ್ಚು ಚರ್ಚೆ ಆಗುತ್ತಿರುವ ಸನಾತ ಧರ್ಮದ ವಿಚಾರದ ಬಗ್ಗೆ ನಾವು ಮಾತನಾಡಲ್ಲ. ದೇವಲೋಕದಲ್ಲೂ ಈ ಸಂಘರ್ಷ ಇತ್ತು. ಪುರಾಣ ಕಾಲದಲ್ಲಿಯೂ ಸಹ ದೇವಾನು ದೇವತೆಗಳನ್ನು ವಿರೋಧಿಸಿದವರು ಇದ್ದಾರೆ. ಆಗ ಮಾನವರು ಮತ್ತು ದಾನವರು ಎಂಬುವರಿದ್ದರು. ಭೂಲೋಕದಲ್ಲಿ ಒಬ್ಬರು ಬೇಕು, ಮತ್ತೊಬ್ಬರು ಬೇಡ ಎನ್ನುತ್ತಿದ್ದರು. ಹಾಗೆಯೇ ಕೆಲವು ಭಿನ್ನಾಭಿಪ್ರಾಯಗಳು ಮುಂದುವರೆದುಕೊಂಡು ಬಂದಿವೆ ಎಂದು ಹೇಳಿದರು.
ಕಾವೇರಿ ನದಿ ನೀರು ಬಿಕ್ಕಟ್ಟು ವಿಚಾರವಾಗಿ ಪ್ರತಿಕ್ರಿಯಿಸಿದ ಸ್ವಾಮೀಜಿ, ಇದು ರಾಜ್ಯ ಸರ್ಕಾರಕ್ಕೆ ಬಿಟ್ಟ ವಿಚಾರ. ಹಿಮಾಲಯಕ್ಕೆ ಬಿಟ್ಟುಕೊಟ್ಟ ವಿಚಾರವಲ್ಲ. ಅದ್ರೆ ಗಂಗೆ ಹರಿದು ಬರುತ್ತಿದ್ದಾಳೆ, ಅದನ್ನೇ ನಾವು ಹಂಚಿಕೊಳ್ಳುತ್ತಿದ್ದೇವೆ ಎಂದಷ್ಟೇ ಹೇಳಿದರು.
ಇದನ್ನೂ ಓದಿ:ಕಾವೇರಿ ನೆಪದಲ್ಲಿ ಬಿಜೆಪಿ, ಜೆಡಿಎಸ್ ರಾಜಕೀಯ: ಸಿಎಂ ಸಿದ್ದರಾಮಯ್ಯ