ಚಿಕ್ಕೋಡಿಯಲ್ಲಿ ಚಿಣ್ಣರೊಂದಿಗೆ ಗಲ್ಲಿ ಕ್ರಿಕೆಟ್ ಆಡಿದ ಮಾಜಿ ಸಂಸದ ರಮೇಶ್ ಕತ್ತಿ - ETv Bharat kannada news
ಮಾಜಿ ಸಂಸದ ರಮೇಶ್ ಕತ್ತಿ ತಮ್ಮ ಬಿಡುವಿನ ಸಮಯದಲ್ಲಿ ಸ್ಥಳೀಯ ಮಕ್ಕಳೊಂದಿಗೆ ಗಲ್ಲಿ ಕ್ರಿಕೆಟ್ ಆಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿಯ ರಾಹುಲ್ ಕ್ರೀಡಾಂಗಣದಲ್ಲಿ ಮಕ್ಕಳೊಂದಿಗೆ ಕೆಲ ಕಾಲ ಕ್ರಿಕೆಟ್ ಆಟವನ್ನು ಆಡಿದರು. ಕತ್ತಿ ಅವರು ಈ ಹಿಂದೆ ಕೂಡಾ ಗ್ರಾಮೀಣ ಕ್ರೀಡೆ ಕಬಡ್ಡಿ ಆಡಿ ಎಲ್ಲರ ಗಮನ ಸೆಳೆದಿದ್ದರು. ಅದರೊಂದಿಗೆ ಸರಾಗವಾಗಿ ಭಜನೆ ಪದಗಳನ್ನು, ತಾಳ ತಂಬೂರಿ ಬಾರಿಸುವಲ್ಲಿಯೂ ರಮೇಶ್ ಕತ್ತಿ ನಿಪುಣರು.
Last Updated : Feb 3, 2023, 8:34 PM IST